ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14 ರಂದು ಸೈನಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಕುರಿತು ದೇಶದೆಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಧಾಳಿಗೆ ಸರಿಯಾದ ಪ್ರತ್ಯುತ್ತರ ನೀಡಬೇಕೆಂದು ಸರಕಾರದ ಮೇಲೆ ಸಾರ್ವಜನಿಕರು ಒತ್ತಡ ಹೇರುತ್ತಿದ್ದಾರೆ. ಅಂತೆಯೇ ಮೋದಿ ನೇತ್ರತ್ವದ ಕೇಂದ್ರ ಸರಕಾರ ಕಠಿಣ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯಲಿಲ್ಲ. ಪಾಕಿಸ್ತಾನದಿಂದ ಭಾರತಕ್ಕೆ ರಪ್ತಾಗುತ್ತಿದ್ದ ವಸ್ತುಗಳ ಮೇಲೆ ಶೇ.200% ಟ್ಯಾಕ್ಸ್ ಹೆಚ್ಚಿಸಿ ಆದೇಶ ಹೊರಡಿಸಿತ್ತು.
ಪ್ರತಿಕಾರ ತೀರಿಸುವ ವಿಷಯದಲ್ಲಿ ರೈತರು ಹಿಂದೆ ಬಿಳಲಿಲ್ಲ. ನಮ್ಮ ದೇಶದಿಂದ ಪಾಕಿಸ್ತಾನಕ್ಕೆ ಅನೇಕ ಆಹಾರ ಪದಾರ್ಥಗಳು ರಪ್ತಾಗುತ್ತಿದ್ದು, ಪಾಕಿಸ್ತಾನದ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ನಮ್ಮ ನಾಡಿನ ರೈತರು ನಿರ್ಧರಿಸಿದರು. ಇದರ ಪರಿಣಾಮವಾಗಿ ಪಾಕಿಸ್ತಾನ ಕಂಗೆಟ್ಟು ಹೋಗಿದೆ. ಅಲ್ಲಿನ ಮಾರುಕಟ್ಟೆಯಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ಏರಿವೆ. ಅಲ್ಲಿನ ಮಾರುಕಟ್ಟೆಯಲ್ಲಿ ಒಂದು ಕೆಜಿ ಟಮಾಟೋ ಬೆಲೆಯೂ 190 ರೂಪಾಯಿಗಿಂತಲೂ ಅಧಿಕವಾಗಿದ್ದು, ಅಲ್ಲಿನ ಮಾರುಕಟ್ಟೆಯಲ್ಲಿ ತಳಮಳ ಉಂಟಾಗಿದೆ.
ಈ ಕುರಿತು ಅಲ್ಲಿನ ಮಾಧ್ಯಮದಲ್ಲಿ ಪ್ರಸಾರವಾದ ಸುದ್ದಿಯನ್ನು ಒಮ್ಮೆ ನೋಡಿ ನಿಮಗೇ ಅರ್ಥವಾಗುತ್ತದೆ. ಭಾರತದ ವಿರುದ್ಧ ಭಯೋತ್ಪಾದಕರನ್ನು ಚೂಬಿಡುವ ಪಾಕಿಸ್ತಾನದ ಕುತಂತ್ರ ಬುದ್ದಿಗೆ ಸರಿಯಾದ ಪಾಠಕಲಿಸುವ ಸಮಯ ಇದಾಗಿದ್ದು, ಸರಕಾರದ ಪ್ರತಿಯೊಂದು ಕಠಿಣ ನಿರ್ಧಾರಕ್ಕೆ ನಮ್ಮೆಲ್ಲರ ಬೆಂಬಲ ಅಗತ್ಯವಾಗಿದೆ…
ಇದನ್ನೂ ಓದಿರಿ :ನೀವು ಈ ಆಹಾರ ಪದ್ಧತಿ ಅನುಸರಿಸಿದರೆ ರಾತ್ರಿ ಒಳ್ಳೆಯ ನಿದ್ರೆ ಮಾಡಬಹುದು ನೋಡಿ..!