ಬೆಂಗಳೂರು (ಜೂ.4): ಕೇಂದ್ರ ಸರ್ಕಾರ CBSE 12 ನೇಯ ತರಗತಿ ಪರೀಕ್ಷೆ ರದ್ದು ಮಾಡಿದ ಬೆನ್ನಲ್ಲೇ ರಾಜ್ಯ ಸರಕಾರ ಸಹ ತನ್ನ ನಿರ್ಧಾರ ಹೊರಹಾಕಿದೆ. ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿ, ಜುಲೈ ಅಥವಾ ಆಗಸ್ಟ್ ನಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ನಿರ್ಧರಿಸಿದೆ.
ಸದ್ಯ ದ್ವಿತೀಯ ಪಿಯುಸಿ ತಲುಪಿರುವ ವಿದ್ಯಾರ್ಥಿಗಳು ಕಳೆದ ಬಾರಿ ಪ್ರಥಮ ಪಿಯುಸಿ ಜಿಲ್ಲಾ ಮಟ್ಟದ ಪರೀಕ್ಷೆ ಎದುರಿಸಿದ್ದರು. ಈ ಆಧಾರ ಮತ್ತು ಕೆಲವು ಮಾನದಂಡಗಳ ಆಧಾರದ ಮೇಲೆ ಈ ಬಾರಿ ಅಂಕ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಇದಲ್ಲದೆ ವಿದ್ಯಾರ್ಥಿಗಳಿಗೆ ಕೆಲವು ಮಾನದಂಡ ತೆಗೆದುಕೊಂಡು A, B, C ಗ್ರೇಡ್ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ನೀಡಿರುವ ಅಂಕದ ಕುರಿತು ಸರಿಯಿಲ್ಲ ಎಂಬ ಅಭಿಪ್ರಾಯ ಹೊಂದಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಇದನ್ನೂ ಓದಿರಿ: ಸ್ಯಾಂಡಲ್ ವುಡ್ ನ ಹಿರಿಯ ನಟಿ ಬಿ. ಜಯಾ ಇನ್ನಿಲ್ಲ
ಇನ್ನು SSLC ವಿದ್ಯಾರ್ಥಿಗಳಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಜುಲೈ ಅಥವಾ ಆಗಸ್ಟ್ ನಲ್ಲಿ ಪರೀಕ್ಷೆ ನಡೆಸಲಾಗುವುದು. SSLC ಎನ್ನುವುದು ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟವಾಗಿದೆ. ಪರೀಕ್ಷೆ ನಡೆಸದೆ ಅವರ ಕಲಿಕಾ ಮಟ್ಟ ನಿರ್ಧರಿಸುವುದು ಸರಿಯಲ್ಲ. ಈ ಬಾರಿ 8 ಲಕ್ಷದ 75 ಸಾವಿರ ವಿದ್ಯಾರ್ಥಿಗಳು SSLC ಪರೀಕ್ಷೆ ಬರೆಯಲಿದ್ದಾರೆ. ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಸೇರಿ ಬಹು ಆಯ್ಕೆಯ ಪ್ರಶ್ನೆಗಳ ಒಂದು ಪೇಪರ್ ಹಾಗೂ ಲಾಂಗ್ವೇಜ್ ನ ಒಂದು ಪೇಪರ್ ನಂತೆ ಎರಡು ಪೇಪರ್ ನ ಪರೀಕ್ಷೆ ನಡೆಸಿ ಗ್ರೇಡ್ ಸಿಸ್ಟಮ್ ನಲ್ಲಿ ಉತ್ತೀರ್ಣ ಮಾಡಲಾಗುವುದು ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.