ಭಾರತೀಯ ಒಲಂಪಿಕ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಪಿಟಿ ಉಷಾ ಆಯ್ಕೆ

pt-usha-elected-as-president-of-indian-olympic-association

ನವದೆಹಲಿ: ಭಾರತೀಯ ಒಲಂಪಿಕ್ ಸಂಸ್ಥೆಯ (Indian Olympic Association) ನೂತನ ಅಧ್ಯಕ್ಷರಾಗಿ ಲೆಜೆಂಡರಿ ಅಥ್ಲೀಟ್ ಪಿಟಿ ಉಷಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಐಒಎ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಿಟಿ ಉಷಾ ಅವರು ಪಾತ್ರರಾಗಿದ್ದಾರೆ.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಪಿಟಿ ಉಷಾ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಕೇಂದ್ರ ಕ್ರೀಡಾ ಸಚಿವರಾಗಿದ್ದ, ಸಚಿವ ಕಿರಣ್ ರಿಜಿಜು ಅವರು ಟ್ವಿಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

“ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಲೆಜೆಂಡರಿ ಗೋಲ್ಡನ್ ಗರ್ಲ್ ಶ್ರೀಮತಿ ಪಿ ಟಿ ಉಷಾ ಅವರಿಗೆ ಅಭಿನಂದನೆಗಳು. ಪ್ರತಿಷ್ಠಿತ ಐಒಎಯ ಪದಾಧಿಕಾರಿಗಳಾಗಿರುವ ದೇಶದ ಎಲ್ಲಾ ಕ್ರೀಡಾ ವೀರರನ್ನು ನಾನು ಅಭಿನಂದಿಸುತ್ತೇನೆ! ದೇಶ ಅವರ ಬಗ್ಗೆ ಹೆಮ್ಮೆಪಡುತ್ತದೆ!” ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here