ಮುಂಬೈ : ಶನಿವಾರ ನಡೆದ ಆರನೇಯ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಪೈನಲ್ ಪಂದ್ಯದಲ್ಲಿ ಗುಜರಾತ್ ಫಾರ್ಚುನ್ ಜೈಯಂಟ್ಸ್ ವಿರುದ್ಧ ಭರ್ಜರಿ ಜಯಗಳಿಸುವ ಮೂಲಕ ಬೆಂಗಳೂರು ಬುಲ್ಸ್ ಚಾಂಪಿಯನ್ ಕಿರೀಟವನ್ನು ತನ್ನದಾಗಿಸಿಕೊಂಡಿದೆ.

ಆರನೇಯ ಆವೃತ್ತಿಯ ಪೈನಲ್ ಪಂದ್ಯದಲ್ಲಿ 38-33 ಅಂಕಗಳೊಂದಿಗೆ ಬೆಂಗಳೂರು ವಿಜಯವನ್ನು ತನ್ನದಾಗಿಸಿಕೊಂಡಿತು. ಬೆಂಗಳೂರು ಉತ್ತಮ ಆರಂಬವನ್ನು ಮಾಡಿದರೂ ಮೊದಲಾರ್ಧ ಮುಗಿಯುವ ವೇಳೆಗೆ 9-15 ರ ಹಿನ್ನಡೆಯನ್ನು ಅನುಭವಿಸಿತು.

ಪವನ್ ಕುಮಾರ್ ಶೆರಾವತ್ ಅವರ ಅತ್ಯುತ್ತಮ ಪ್ರದರ್ಶನವು ಬೆಂಗಳೂರಿನ ಗೆಲುವಿಗೆ ದಾರಿಯಾಯಿತು. ಅತ್ಯುತ್ತಮ ಸುಪರ್ ರೆಡ್ ಮತ್ತು ತುಪಾನಿ ರೆಡ್ ಗಳನ್ನು ಮಾಡಿದ ಪವನ್ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಈ ಮೂಲಕ ಬೆಂಗಳೂರು ಬುಲ್ಸ್ ಚೊಚ್ಚಲ ಪ್ರಶಸ್ತಿಯನ್ನು ಎತ್ತಿಹಿಡಿದು ಸಂಭ್ರಮಿಸಿತು.

LEAVE A REPLY

Please enter your comment!
Please enter your name here