ಪ್ರಿಯಾಂಕಾ ವಾದ್ರಾ ಅವರನ್ನು ಉತ್ತರ ಪ್ರದೇಶದ ಕಾಂಗ್ರೆಸ್ ರಾಜಕೀಯ ಕಾರ್ಯದರ್ಶಿಯಾಗಿ ನೆಮಿಸಿರುವ ಕುರಿತು ಮಾತನಾಡಿರುವ ನರೇಂದ್ರ ಮೋದಿಯವರು “ಕುಟುಂಬಕ್ಕೆ ಮೊದಲ ಆದ್ಯತೆ ನೀಡೋದೇ ಕಾಂಗ್ರೆಸ್ ಸಂಸ್ಕೃತಿ” ಎಂದು ಟೀಕಿಸಿದ್ದಾರೆ.

ನರೇಂದ್ರ ಮೋದಿಯವರು ಮಹಾರಾಷ್ಟ್ರದ ಬಾರಾಮತಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತ ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣವನ್ನು ಮತ್ತೆ ಟೀಕಿಸಿದ್ದಾರೆ. ಕೆಲವು ಪಕ್ಷದಲ್ಲಿ ಕೇವಲ ಒಂದು ಕುಟುಂಬ ಮಾತ್ರ ನಿರ್ಧಾರವನ್ನು ಕೈಗೊಳ್ಳುತ್ತದೆ. ಆದರೆ ಬಿಜೆಪಿಯಲ್ಲಿ ಯಾರು ಯಾವ ಕುಟುಂಬದಿಂದ ಬಂದಿದ್ದಾರೆ ಎಂದು ನೋಡುವುದಿಲ್ಲ. ಇಲ್ಲಿ ಸಾಮಾನ್ಯನು ಸಹ ಉನ್ನತ ಮಟ್ಟಕ್ಕೆ ಏರಬಹುದಾಗಿದೆ. ಪ್ರಜಾಪ್ರಭುತ್ವದ ಆದರ್ಶಗಳನ್ನು ಪಾಲಿಸುತ್ತಿರುವ ಏಕೈಕ ಪಕ್ಷ ಎಂದರೆ ಬಿಜೆಪಿ ಮಾತ್ರ . ಕಾರ್ಯಕರ್ತರ ಪಕ್ಷ ಬಿಜೆಪಿ, ಕಾರ್ಯಕರ್ತರೇ ಇದನ್ನು ಕಟ್ಟಿ, ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿರಿ : ಯುದ್ದ ಟ್ಯಾಂಕರ್ ನಲ್ಲಿ ಪ್ರಧಾನಿ ಮೋದಿ ಸವಾರಿ..!

LEAVE A REPLY

Please enter your comment!
Please enter your name here