ನವದೆಹಲಿ: ದೆಹಲಿ ಸಚಿವ ಸತ್ಯೇಂದ್ರ ಜೈನ್ (Satyendar Jain) ಗೆ ಜೈಲಿನಲ್ಲಿ ಮಸಾಜ್ ಸೇವೆ ನೀಡುತ್ತಿದ್ದ ವ್ಯಕ್ತಿ ಸಹ ಕೈದಿಯೇ ಹೊರತು ಫಿಸಿಯೋ ಥೆರಪಿಸ್ಟ್ ಅಲ್ಲ ಎಂದು ತಿಹಾರ್ ಜೈಲು ಮೂಲಗಳು ತಿಳಿಸಿವೆ ಎನ್ನಲಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜೈಲು ಸೇರಿರುವ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್‍ಗೆ ತಿಹಾರ್ ಜೈಲಿನಲ್ಲಿ ವಿಐಪಿ ಟ್ರೀಟ್‍ಮೆಂಟ್ ನೀಡಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದ ಅರವಿಂದ್ ಕೇಜ್ರಿವಾಲ್, ಜೈಲಿನಲ್ಲಿ ಯಾವುದೇ ಮಸಾಜ್ ಅಥವಾ ವಿಐಪಿ ಟ್ರೀಟ್‍ಮೆಂಟ್ ಜೈನ್ ಅವರಿಗೆ ನೀಡಿರಲಿಲ್ಲ. ಬದಲಾಗಿ ಅವರಿಗೆ ಫಿಸಿಯೋ ಥೆರಪಿಸ್ಟ್ ಮೂಲಕ ಚಿಕಿತ್ಸೆ ನೀಡಲಾಗಿತ್ತು ಎಂದು ಆರೋಪವನ್ನು ನಿರಾಕರಿಸಿದ್ದರು.
ಇದನ್ನೂ ಓದಿರಿ: ಜೈಲಿನಲ್ಲಿ ಸತ್ಯೇಂದ್ರ ಜೈನ್‍ಗೆ ಮಾಡಿದ್ದು ಮಸಾಜ್ ಅಲ್ಲ, ಫಿಸಿಯೋಥೆರಪಿ – ಕೇಜ್ರಿವಾಲ್ ತಿರುಗೇಟು
ಆಮ್ ಆದ್ಮಿ ಪಕ್ಷ, ಸಿಸೋಡಿಯಾ ಸೇರಿದಂತೆ ಹಲವರು ಬಿಜೆಪಿ ಆರೋಪವನ್ನು ತಳ್ಳಿಹಾಕಿ, ಜೈನ್ ಅವರು ಬೆನ್ನು ನೋವಿಗೆ ಫಿಸಿಯೋ ಥೆರಪಿಸ್ಟ್ ನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿತ್ತು. ಇದೀಗ ಸತ್ಯೇಂದ್ರ ಜೈನ್ ಗೆ ಮಸಾಜ್ ಸೇವೆ ನೀಡುತ್ತಿದ್ದ ವ್ಯಕ್ತಿ ಫಿಸಿಯೋ ಅಲ್ಲ, ಬದಲಿಗೆ ಆತ ತಿಹಾರ್ ಜೈಲಿನ ಸಹ ಕೈದಿಯಾಗಿದ್ದು, ಈ ಹಿಂದೆ 10 ವರ್ಷದ ಬಾಲಕಿ ಮೇಲೆ ದೌರ್ಜನ್ಯವೆಸಗಿ ಜೈಲು ಪಾಲಾಗಿರುವ ಕೈದಿ ಎಂದು ತಿಹಾರ್ ಜೈಲು ಮೂಲಗಳು ತಿಳಿಸಿವೆ.
ತಿಹಾರ್ ಜೈಲಿನ ಅಧಿಕೃತ ಮೂಲಗಳ ಪ್ರಕಾರ, ವೀಡಿಯೋಗಳಲ್ಲಿ ಆಪ್ ಸಚಿವರಿಗೆ ಮಸಾಜ್ ಮಾಡುತ್ತಿರುವ ವ್ಯಕ್ತಿ ರಿಂಕು ಎಂಬಾತನಾಗಿದ್ದಾನೆ. ಆತ ಲೈಂಗಿಕ ಅಪರಾಧಗಳಿಂದ ಪೋಕ್ಸೊ ಕಾನೂನಿನ ಅಡಿಯಲ್ಲಿ ಅತ್ಯಾಚಾರದ ಆರೋಪ ಹೊರಿಸಲಾದ ಕೈದಿಯಾಗಿದ್ದಾನೆ. ಕಳೆದ ವರ್ಷ 10 ನೇ ತರಗತಿ ವಿದ್ಯಾರ್ಥಿನಿಯಾದ ತನ್ನ ಸ್ವಂತ ಮಗಳು ಆತನ ಮೇಲೆ ಹಲ್ಲೆ ನಡೆಸಿದ ದೂರು ದಾಖಲಿಸಿದ್ದಳು. ಹೀಗಾಗಿ ಅತನನ್ನು ಬಂಧಿಸಲಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿರಿ: Mangaluru Blast: ಬಾಂಬ್ ತಯಾರಿಸುತ್ತಿರುವ ವಿಡಿಯೋಗಳನ್ನು ಐಸಿಸ್ ಸಹಚರರೊಂದಿಗೆ ಹಂಚಿಕೊಂಡಿದ್ದ ಶಾರಿಕ್!