ಕೆಂಪೇಗೌಡರ 108 ಅಡಿ ಎತ್ತರದ ‘ಪ್ರಗತಿಯ ಪ್ರತಿಮೆ’ ಅನಾವರಣಗೊಳಿಸಿದ ಪ್ರಧಾನಿ ಮೋದಿ

ನಾಡಪ್ರಭು ಕೆಂಪೇಗೌಡ । prime-minister-narendra-modi-unveils-statue-of-prosperity-the-108-feet-bronze-statue-of-nadaprabhu-kempegowda-in-bengaluru

ಬೆಂಗಳೂರು (ನ.11): ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ಹೊಸದಾಗಿ ನಿರ್ಮಾಣವಾದ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಅನಾವರಣಗೊಳಿಸಿದ್ದಾರೆ.

ಬೆಂಗಳೂರು ನಿರ್ಮಾತೃ ಕೆಂಪೇಗೌಡರ  108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ರಾಜ್ಯದ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿಮೆಯ ನಿರ್ಮಾಣದಲ್ಲಿ 100 ಟನ್ ಕಂಚು, 120 ಟಕ್ ಉಕ್ಕನ್ನು ಬಳಸಿಕೊಳ್ಳಲಾಗಿದೆ. ಈ ಪ್ರತಿಮೆಯಲ್ಲಿರುವ ಖಡ್ಗದ ತೂಕವೇ 4 ಟನ್ಈ ಭಾರವನ್ನು ಹೊಂದಿದೆ. ಪ್ರತಿಮೆಯ ಸುತ್ತಲಿನ ಸ್ಥಳದಲ್ಲಿ ಥೀಮ್ ಪಾರ್ಕ್​ ಅಭಿವೃದ್ಧಿಪಡಿಸಲಾಗಿದೆ.

ಇಂದು ಎಚ್‌ಎಎಲ್‌ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ವಿಮಾನ ನಿಲ್ದಾಣದ ಟರ್ಮಿನಲ್-2 ಉದ್ಘಾಟಿಸಿ ನಂತರ ಕೆಂಪೇಗೌಡರ ಪ್ರತಿಮೆಯನ್ನು ಅನಾವರಣ ಮಾಡಿದರು. ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಅಶ್ವಿನಿ ವೈಷ್ಣವ್, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಉಪಸ್ಥಿತರಿದ್ದರು.

ಇದನ್ನೂ ಓದಿರಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಸುಪ್ರೀಂಕೋರ್ಟ್ ಆದೇಶ

ಈ ಪ್ರತಿಮೆಯನ್ನು ಸರಕಾರ ‘ಪ್ರಗತಿಯ ಪ್ರತಿಮೆ’ ಎಂದು ನಾಮಕರಣ ಮಾಡಿದೆ. ಇನ್ನು ಈ ಪ್ರತಿಮೆಯನ್ನು ಕಲಾವಿದ ರಾಮ್ ಸುತಾರ್ ವಿನ್ಯಾಸ ಗೊಳಿಸಿದ್ದಾರೆ. ಈ ಪ್ರತಿಮೆಯ ನಿರ್ಮಾಣಕ್ಕೆ 14 ತಿಂಗಳುಗಳ ಕಾಲ ತಗುಲಿದ್ದು, 84 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ.

LEAVE A REPLY

Please enter your comment!
Please enter your name here