ನವದೆಹಲಿ: ಗ್ರಾಮೀಣ ಪ್ರದೇಶದಲ್ಲಿ ಸುಧಾರಿತ ಸ್ವಾಮಿತ್ವ (SVAMITVA) ಯೋಜನೆಯ ಮೂಲಕ ಭೂವ್ಯಾಜ್ಯಗಳನ್ನು ಬಗೆಹರಿಸುವ ಮತ್ತು ಆಸ್ತಿ ಕಾರ್ಡ್ ವಿತರಿಸುವ ಮಹತ್ವದ ಯೋಜನೆಗೆ ಯವರು ಭಾನುವಾರ ಚಾಲನೆ ನೀಡಿದರು.
ಈ ಸಮಯದಲ್ಲಿ ಮಾತನಾಡಿದ ನರೇಂದ್ರ ಮೋದಿಯವರು ಈ ಯೋಜನೆಯಿಂದ ಗ್ರಾಮೀಣ ಭಾಗದ ಜನರ ಜೀವನದಲ್ಲಿ ದೊಡ್ಡ ಪರಿವರ್ತನೆಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ. ಈ ಯೋಜನೆಯಿಂದ ಆಸ್ತಿಗಳ ಮಾಲೀಕತ್ವದ ಕಾರ್ಡುಗಳನ್ನು ಪಡೆದು ಗ್ರಾಮೀಣ ಜನ ಸಾಲ ಮತ್ತಿತರ ಆರ್ಥಿಕ ನೆರವನ್ನು ಪಡೆದುಕೊಳ್ಳಲು ಸಹಾಯಕವಾಗಲಿದೆ ಎಂದು ತಿಳಿಸಿದರು.
Prime Minister Narendra Modi launches the physical distribution of Property Cards under the ‘Survey of Villages and Mapping with Improvised Technology in Village Areas’ (SVAMITVA) scheme, through video conferencing. pic.twitter.com/TrU6Tm3CTp
— ANI (@ANI) October 11, 2020
ಏನೀದು ಸ್ವಾಮಿತ್ವ ಯೋಜನೆ..?
ಗ್ರಾಮೀಣ ಜನರ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಆಸ್ತಿ ದಾಖಲೆಯ ಭೌತಿಕ ಪತ್ರವಾಗಿದೆ. ಈ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ಆಸ್ತಿ ಹಕ್ಕಿನಬಗ್ಗೆ ಸ್ಪಷ್ಟತೆ ದೊರೆಯಲಿದೆ. ಈ ಯೋಜನೆಗಾಗಿ ಕಾರ್ಯ ನಿರ್ವಹಿಸಲು ದೇಶವ್ಯಾಪಿ 300 ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ 6.62 ಲಕ್ಷ ಗ್ರಾಮಗಳಿಗೆ ಪ್ರಯೋಜನವಾಗಲಿದೆ. ಇದಲ್ಲದೆ ಗ್ರಾಮೀಣ ರೈತರ ಜಮೀನು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿದೆ.
ಎಸ್ ಎಂ ಎಸ್ ಲಿಂಕ್ ಮೂಲಕ ತಮ್ಮ ಆಸ್ತಿಯ ಕಾರ್ಡ್ ಪಡೆಯಬಹುದು
ಸುಮಾರು 1 ಲಕ್ಷ ಮೌಲ್ಯದ ಆಸ್ತಿಯನ್ನು ಹೊಂದಿರುವವರು ತಮ್ಮ ಮೊಬೈಲ್ ಫೋನಿನಲ್ಲಿ ಎಸ್ ಎಂ ಎಸ್ ಮಾಡುವ ಮೂಲಕ ಲಿಂಕ್ ಪಡೆದುಕೊಂಡು ತಮ್ಮ ಆಸ್ತಿಯ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ಸ್ವಾಮಿತ್ವ ಯೋಜನೆಯಲ್ಲಿ ಕರ್ನಾಟಕದ 2 ಗ್ರಾಮಗಳು
ಸ್ವಾಮಿತ್ವ ಯೋಜನೆಯನ್ನು ಪ್ರಾಯೋಗಿಕವಾಗಿ ಉತ್ತರ ಪ್ರದೇಶದ 346, ಹರಿಯಾಣದ 221, ಮಹಾರಾಷ್ಟ್ರದ 100, ಮಧ್ಯ ಪ್ರದೇಶದ 44, ಉತ್ತರಾ ಖಂಡದ 50 ಮತ್ತು ಕರ್ನಾಟಕದ 2 ಗ್ರಾಮಗಳು ಸೇರಿ ಒಟ್ಟು 763 ಗ್ರಾಮಗಳು ಯೋಜನೆಯ ಲಾಭವನ್ನು ಪಡೆದುಕೊಳ್ಳಲಿದೆ.
ಈ ಯೋಜನೆಯ ಕುರಿತು ಟ್ವಿಟ್ ಮಾಡಿರುವ ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, “ಜಮೀನಿನ ಮಾಲೀಕತ್ವದ ದಾಖಲೆ ಇಲ್ಲದೆ ಭೂವ್ಯಾಜ್ಯಗಳಲ್ಲಿ ಸಿಲುಕಿ ಹಲವಾರು ಸೌಲಭ್ಯಗಳಿಂದ ವಂಚಿತರಾಗಿದ್ದ ರೈತರನ್ನು ಸಬಲೀಕರಣಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ಇಂದು ‘ಸ್ವಾಮಿತ್ವ’ ಯೋಜನೆಯಡಿ ಆಸ್ತಿ ಕಾರ್ಡ್ ಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದು ಗ್ರಾಮೀಣ ಭಾರತದ ಸಾಮಾಜಿಕ ಜೀವನದಲ್ಲಿ ಮಹತ್ತರ ಬದಲಾವಣೆ ತರಲಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿರಿ: ಪ್ರಧಾನಿಗೆ ವಿಶೇಷ ವಿಮಾನ, ಯೋಧರಿಗೆ ಬುಲೆಟ್ ಪ್ರೂಫ್ ರಹಿತ ವಾಹನ – ರಾಹುಲ್ ಗಾಂಧಿ