LIVE: ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ 

prime-minister-narendra-modi-launched-the-national-youth-festival-2023

ಹುಬ್ಬಳ್ಳಿ: ನೆಹರು ಮೈದಾನದಲ್ಲಿ ಆಯೋಜಿಸಲಾಗಿರುವ 26 ನೇಯ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಹಾವೇರಿಯಲ್ಲಿ ತಯಾರಿಸಲಾದ ವಿಶೇಷ ಏಲಕ್ಕಿ ಹಾರ ಮತ್ತು ವಿಶೇಷ ಪೀಠವನ್ನು ಸಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಗೌರವ ಸಲ್ಲಿಸಲಾಯಿತು. ಇದೆ ವೇಳೆ ವಿಶೇಷವಾಗಿ ತಯಾರಿಸಲಾದ ಬಿದಿರಿ ಕಳೆಯ ಸ್ವಾಮಿ ವಿವೇಕಾನಂದರ ಅವರ ಮೂರ್ತಿಯನ್ನು ಉಡುಗೊರೆ ನೀಡಲಾಯಿತು.

ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ‘ನಾವು ಈ ವರ್ಷ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷವಾಗಿ ಯುವಕರಿಗೆ ರಾಷ್ಟ್ರ ನಿರ್ಮಾಣದಲ್ಲಿ ಯುವಕರು ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದಿದ್ದಾರೆ’ ಎಂದು ಅವರು ಈ ಸಮಯದಲ್ಲಿ ಹೇಳಿದ್ದಾರೆ.

ಆ ನಂತರದಲ್ಲಿ ವಿವಿಧ ರಾಜ್ಯಗಳ ಸಾಂಸ್ಕೃತಿಕ ನೃತ್ಯ ವೈಭವವನ್ನು ಪ್ರದರ್ಶನ ಮಾಡಲಾಯಿತು. ಭಾರತೀಯ ಯೋಗ ವಿಜ್ಞಾನ ಮತ್ತು ಮಲ್ಲಗಂಭ ವಿಶೇಷ ಪ್ರದರ್ಶನವನ್ನು ಮಾಡಲಾಯಿತು.

ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತ, ಮೂರೂ ಸಾವಿರಮಠ, ಸಿದ್ಧಾರೂಢ ಮಠ ಇಂತಹ ಸಾವಿರ ಮಠಗಳ ನಾಡಿಗೆ ನನ್ನ ನಮಸ್ಕಾರಗಳು ಎಂದು ಭಾಷಣ ಆರಂಭಿಸಿದ ಮೋದಿ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ, ಪಂಡಿತ ಬಸವರಾಜ ರಾಜಗುರು, ಪಂಡಿತ ಮಲ್ಲಿಕಾರ್ಜುನ್ ಮನ್ಸೂರ್, ಭಾರತರತ್ನ ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಅವರ ಸೇವೆಯನ್ನು ನೆನಪಿಸಿಕೊಳ್ಳಲು ಮರೆಯಲಿಲ್ಲ.

ಸಿದ್ಧೇಶ್ವರ ಶ್ರೀಗಳನ್ನು ನೆನಪಿಸಿಕೊಳ್ಳುತ್ತಾ, ಸ್ವಾಮೀಜಿಯವರಿಗೆ ಶೃದ್ಧಾಂಜಲಿ ಸಲ್ಲಿಸಿದರು. ಕರ್ನಾಟಕಕಕ್ಕೂ ಹಾಗು ಸ್ವಾಮಿ ವಿವೇಕಾನಂದರಿಗೂ ಅವಿನಾಭಾವ ಸಂಬಂಧವಿದೆ. ಅವರು ಈ ನಾಡಿನಲ್ಲಿ ಸಂಚರಿಸಿದ್ದಾರೆ ಅಲ್ಲದೇ ಅವರ ಶಿಕಾಗೋ ಪ್ರಯಾಣಕ್ಕೆ ಮೈಸೂರಿನ ಅರಸರು ಸಹಾಯ ಮಾಡಿದವರಲ್ಲಿ ಒಬ್ಬರಾಗಿದ್ದರು ಎಂದು ಹೇಳಿದರು. ಇದೇ ಸಮಯದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಈ ನೆಲದ ವಿವಿಧ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯಲು ಮರೆಯಲಿಲ್ಲ.

ಕಳೆದ 8 ವರ್ಷಗಳಲ್ಲಿ ಯುವಕರಿಗಾಗಿಯೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಯುವಕರಿಗೆ ದೇಶದಲ್ಲಿ ರನ್ ವೇ ಸಿದ್ಧಪಡಿಸಿದ್ದೇವೆ. ನೀವು ಟೇಕಾಫ್ ಆಗುವುದೊಂದೇ ಬಾಕಿಯಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಭಾರತವು ಎಲ್ಲ ರಂಗಗಳಲ್ಲಿಯೂ ಸಕಾರಾತ್ಮಕ ಅಭಿವೃದ್ಧಿಯನ್ನು ಕಾಣುತ್ತಿದ್ದು, ಸ್ಟಾರ್ಟ್ ಅಪ್ ಗಳಿಗೆ ಹಣ ಹರಿದು ಬರುತ್ತಿವೆ. ದೇಶವು ದೊಡ್ಡ ಆರ್ಥಿಕತೆಯಾಗಿ ಬೆಳವಣಿಗೆಯನ್ನು ಕಾಣುತ್ತಿದೆ. ಭಾರತವು ಜಾಗತಿಕವಾಗಿ 5 ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, ಮುಂದಿನ ದಿನದಲ್ಲಿ ಮೊದಲ 3 ಸ್ಥಾನಗಳಲ್ಲಿ ಇರಲು ನಾವು ಬಯಸುತ್ತೇವೆ ಎಂದು ಹೇಳಿದರು.

 

ಇದನ್ನೂ ಓದಿರಿ: ಯುವಜನೋತ್ಸವಕ್ಕೆ ಆಗಮಿಸಿದ ಪ್ರಧಾನಿ: ಮಾರ್ಗ ಮಧ್ಯೆ ಕಾರು ಜನರತ್ತ ಕೈ ಬೀಸಿದ ಮೋದಿ

LEAVE A REPLY

Please enter your comment!
Please enter your name here