prime-minister-narendra-modi-is-scheduled-to-arrive-at-isro-headquarters-in-bangalore

ಬೆಂಗಳೂರು: ಚಂದ್ರಯಾನ-2 ರ ರೋವರನ್ನು ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆಯನ್ನು ನೋಡಲು ನರೇಂದ್ರ ಮೋದಿಯವರು ಇಂದು 9.30 ರ ಸುಮಾರಿಗೆ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಬಂದಿಳಿಯಲಿದ್ದಾರೆ. ಈ ರೋಚಕ ಕ್ಷಣವನ್ನು ಇಸ್ರೋ ಕೇಂದ್ರ ಸಂಸ್ಥೆಯಲ್ಲಿ ಕುಳಿತು ನೇರ ವಿಕ್ಷಣೆಯನ್ನು ಮಾಡಲಿದ್ದಾರೆ.

ಇದನ್ನೂ ಓದಿರಿ: ಚಂದ್ರಯಾನ-2 : ವಿಕ್ರಮ್ ರೋವರ್ ಲ್ಯಾಂಡಿಂಗ್ ನ ಸವಾಲುಗಳು

ಚಂದ್ರಯಾನ-2 ರ ರೋವರ್ ಚಂದ್ರನ ಕಕ್ಷೆಯನ್ನು ತಲುಪಿದ್ದು, ಸಾಪ್ಟ್ ಲ್ಯಾಂಡಿಂಗ್ ಮೂಲಕ ಚಂದ್ರನ ದಕ್ಷಿಣ ದ್ರುವದಲ್ಲಿ ಇಳಿಯಲಿದೆ. ಚಂದ್ರನ ಮೇಲೆ ಉಪಗ್ರಹ ಇಳಿಸುತ್ತಿರುವ ನಾಲ್ಕನೇಯ ರಾಷ್ಟ್ರ ಭಾರತವಾಗಿದ್ದು, ದೇಶದ ಜನತೆ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಸೆಪ್ಟೆಂಬರ್ 7 ರ ಬೆಳಗಿನ ಜಾವ 1ಗಂಟೆ 55 ನಿಮಿಷಕ್ಕೆ  ಚಂದ್ರನ ಮೇಲೆ ಪ್ರಗ್ಯಾನ್ ರೋವರ್ ಇಳಿಯಲಿದೆ. ಈ ರೋಚಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಮೋದಿಯವರು ಇಸ್ರೋ ಕೇಂದ್ರ ಕಚೇರಿಗೆ ಆಗಮಿಸಲಿದ್ದಾರೆ. ಅವರು ರಾತ್ರಿ 10 ಗಂಟೆಯ ಸುಮಾರಿಗೆ ಇಸ್ರೋದ ಅತಿಥಿ ಗ್ರಹದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಸೆಪ್ಟೆಂಬರ್ 7 ರ 1.30 ರಿಂದ ಬೆಳಿಗ್ಗೆ 7 ಗಂಟೆಯವರೆಗೆ ಇಸ್ರೋದಲ್ಲಿ  ಈ ಕೌತುಕ ನೋಡಲಿದ್ದಾರೆ.

ಇದನ್ನೂ ಓದಿರಿ: ಚಂದ್ರಯಾನ್ -2: ಆರ್ಬಿಟರ್ನಿಂದ ಯಶಸ್ವಿಯಾಗಿ ಬೇರ್ಪಟ್ಟ ಲ್ಯಾಂಡರ್ ವಿಕ್ರಮ್

SPONSORED CONTENT

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here