ಗುಜರಾತ್ : ನರೇಂದ್ರ ಮೋದಿಯವರು ಸ್ವಯಂ ಚಾಲಿತ ಫಿರಂಗಿ ಹೊಂದಿರುವ ಕೆ -9 ವಜ್ರ ಯುದ್ದ ಟ್ಯಾಂಕರ್ ನ್ನು ಒಂದು ಸುತ್ತು ಚಲಾಯಿಸಿ ಪರೀಕ್ಷಿಸಿದ ವಿಡಿಯೋ ಈಗ ವೈರಲ್ ಆಗಿದೆ.

ಶನಿವಾರ ಗುಜರಾತಿನ ಹಝೀರಾದಲ್ಲಿ ಎಲ್ ಎಂಡ್ ಟಿ ಕಂಪನಿ ನಿರ್ಮಿತ ಸ್ವಯಂ ಚಾಲಿತ ಫಿರಂಗಿ ಹೊಂದಿರುವ ಕೆ -9 ವಜ್ರ ಯುದ್ದ ಟ್ಯಾಂಕರ್ ನ್ನು ಪರೀಕ್ಷಿಸಿದ್ದಾರೆ. ಈ ಟ್ಯಾಂಕರನ್ನು ಸೇನೆಯು 30 ವರ್ಷಗಳ ಬಳಿಕ ಇತ್ತೀಚಿಗೆ ಸೇರ್ಪಡೆಮಾಡಿಕೊಂಡಿದೆ. ಅಲ್ಲದೇ ಈ ಬಾರಿಯ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸಲಿದೆ.

ಪ್ರಧಾನಿ ಮೋದಿಯವರೇ ಸ್ವತಃ ಚಲಾಯಿಸುತ್ತಿರುವ 10 ಸೆಕೆಂಡ್ ಗಳ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಧಾನಿಯೊಬ್ಬರು ಯುದ್ಧ ಟ್ಯಾಂಕರ್ ಚಲಾಯಿಸುತ್ತಿರುವುದು ಸೈನಿಕರಿಗೆ ಹಾಗೂ ದೇಶದ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಇದು ಸ್ವದೇಶಿ ನಿರ್ಮಿತ ಮೆಕ್ ಇನ್ ಇಂಡಿಯಾ ಯೋಜನೆಯ ಫಲಶ್ರುತಿಯೇ ಆಗಿದೆ.

ಇದನ್ನೂ ಓದಿರಿ : ಇನ್ಮುಂದೆ ನೇಪಾಳ,ಭೂತಾನ ಪ್ರವಾಸಕ್ಕೆ ದಾಖಲೆ ಪಾತ್ರವಾಗಿ ಆಧಾರ್ ಬಳಸಬಹುದು..!

Image Copyright : google.com

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here