ಯುವಜನೋತ್ಸವಕ್ಕೆ ಆಗಮಿಸಿದ ಪ್ರಧಾನಿ: ಮಾರ್ಗ ಮಧ್ಯೆ ಕಾರು ಜನರತ್ತ ಕೈ ಬೀಸಿದ ಮೋದಿ

prime-minister-arrived-at-yuvajanotsava-modi-waved-to-people-in-the-road

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆಯುವ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು, ಏರ್ಪೋರ್ಟ್‌ನಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡುವ ಮಾರ್ಗದಲ್ಲಿ ಜನಸ್ತೋಮವೇ ನೆರೆದಿದ್ದಾರೆ. ಈ ಸಮಯದಲ್ಲಿ ನೆರೆದಿದ್ದ ಜನರತ್ತ ಕಾರಿನಿಂದ ಹೊರಬಂದು ಮೋದಿ ಕೈಯನ್ನು ಬೀಸಿದ್ದಾರೆ.

ಹುಬ್ಬಳ್ಳಿ ಸಂಪೂರ್ಣ ಕೇಸರಿಮಯವಾಗಿದ್ದು, ಗೋಕುಲ್ ರಸ್ತೆಯನ್ನು ಸುಂದರವಾಗಿ ಸಿಂಗರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆ ಜನರು ಕೂಡ ಮೋದಿ.. ಮೋದಿ.. ಎಂದು ಘೋಷಣೆ ಕೂಗಿದ್ದಾರೆ.

ಇದನ್ನೂ ಓದಿರಿ: ಅವಳಿ ನಗರದಲ್ಲಿ ರಾಷ್ಟ್ರೀಯ ಯುವಜನೋತ್ಸವ – ಅಡುಗೆ ತಯಾರಿ ಹೇಗಿದೆ

ಇದಕ್ಕೂ ಮುನ್ನ ಪ್ರಧಾನಿಗಳು ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 3.20 ಕ್ಕೆ ಬಂದಿಳಿದಿದ್ದರು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ್ದಾರೆ.

ಇದನ್ನೂ ಓದಿರಿ: ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ 

LEAVE A REPLY

Please enter your comment!
Please enter your name here