National Sports Awards: ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿ ಪ್ರಧಾನ

president-murmu-presents-national-sports-adventure-awards-2022

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇಂದು ರಾಷ್ಟೀಯ ಕ್ರೀಡಾ ಪ್ರಶಸ್ತಿ (National Sports Awards-2022) ಯನ್ನು ದ್ರೌಪದಿ ಮುರ್ಮು ಅವರು ಪ್ರಧಾನ ಮಾಡಿದರು.

ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಅಚಂತ ಅವರಿಗೆ ಖೇಲ್ ರತ್ನ ಪ್ರಶಸ್ತಿ ಮತ್ತು ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ 25 ಕ್ರೀಡಾ ಪಟುಗಳಿಗೆ ಅರ್ಜುನ ಪ್ರಶಸ್ತಿ ಪ್ರಧಾನ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ (ನವೆಂಬರ್ 30) ಅದ್ದೂರಿ ಸಮಾರಂಭದಲ್ಲಿ ಎಲ್ಲಾ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ವಿವಿಧ ಕ್ರೀಡಾ ವಿಭಾಗದಲ್ಲಿ ರಾಷ್ಟೀಯ ಪ್ರಶಸ್ತಿಗೆ ಭಾಜನರಾದ ಸಂಪೂರ್ಣ ಸಾಧಕರ ಪಟ್ಟಿ ಇಲ್ಲಿದೆ.

2022 ರ ಅರ್ಜುನ ಪ್ರಶಸ್ತಿ ಪಡೆದ ಕ್ರೀಡಾಪಟುಗಳು

 • ಸೀಮಾ ಪುನಿಯಾ – ಅಥ್ಲೆಟಿಕ್ಸ್
 • ಎಲ್ದೋಸ್ ಪಾಲ್ – ಅಥ್ಲೆಟಿಕ್ಸ್
 • ಅವಿನಾಶ್ ಮುಕುಂದ್ ಸೇಬಲ್ – ಅಥ್ಲೆಟಿಕ್ಸ್
 • ಅಮಿತ್ – ಬಾಕ್ಸಿಂಗ್
 • ನಿಖತ್ ಜರೀನ್ – ಬಾಕ್ಸಿಂಗ್
 • ಭಕ್ತಿ ಪ್ರದೀಪ್ ಕುಲಕರ್ಣಿ – ಚೆಸ್
 • ಆರ್. ಪ್ರಗ್ನಾನಂದಾ – ಚೆಸ್
 • ಡೀಪ್ ಗ್ರೇಸ್ ಎಕ್ಕಾ – ಹಾಕಿ
 • ಶುಶೀಲಾ ದೇವಿ – ಜೂಡೋ
 • ಸಾಕ್ಷಿ ಕುಮಾರಿ – ಕಬಡ್ಡಿ
 • ನಯನ್ ಮೋನಿ ಸೈಕಿಯಾ – ಲಾನ್ ಬೌಲ್
 • ಸಾಗರ್ ಕೈಲಾಸ್ ಓವಲ್ಕರ್ – ಮಲ್ಲಕಂಬ
 • ಅಂಶು – ಕುಸ್ತಿ
 • ಸರಿತಾ – ಕುಸ್ತಿ
 • ಪರ್ವೀನ್ – ವುಶು
 • ಸ್ವಪ್ನಿಲ್ ಸಂಜಯ್ ಪಾಟೀಲ್ – ಪ್ಯಾರಾ ಈಜು
 • ಲಕ್ಷ್ಯ ಸೇನ್ – ಬ್ಯಾಡ್ಮಿಂಟನ್
 • ಹೆಚ್ ಎಸ್ ಪ್ರಣಯ್ – ಬ್ಯಾಡ್ಮಿಂಟನ್
 • ಮಾನಸಿ ಗಿರೀಶ್ಚಂದ್ರ ಜೋಶಿ – ಪ್ಯಾರಾ ಬ್ಯಾಡ್ಮಿಂಟನ್
 • ತರುಣ್ ಧಿಲ್ಲೋನ್ – ಪ್ಯಾರಾ ಬ್ಯಾಡ್ಮಿಂಟನ್
 • ಜೆರ್ಲಿನ್ ಅನಿಕಾ ಜೆ – ಕಿವುಡ ಬ್ಯಾಡ್ಮಿಂಟನ್
 • ಎಲವೆನಿಲ್ ವಲರಿವನ್ – ಶೂಟಿಂಗ್
 • ಓಂಪ್ರಕಾಶ್ ಮಿಥರ್ವಾಲ್ – ಶೂಟಿಂಗ್
 • ಶ್ರೀಜಾ ಅಕುಲಾ – ಟೇಬಲ್ ಟೆನಿಸ್
 • ವಿಕಾಸ್ ಠಾಕೂರ್ – ವೇಟ್‌ಲಿಫ್ಟಿಂಗ್

2022ರ ದ್ರೋಣಾಚಾರ್ಯ ಪ್ರಶಸ್ತಿ ಪ್ರಶಸ್ತಿ ಪಡೆದ ಕ್ರೀಡಾಪಟುಗಳು

 • ಜೀವನ್ಜೋತ್ ಸಿಂಗ್ ತೇಜಾ – ಆರ್ಚರಿ
 • ಮೊಹಮ್ಮದ್ ಅಲಿ ಕಮರ್ – ಬಾಕ್ಸಿಂಗ್
 • ಸುಮಾ ಸಿದ್ಧಾರ್ಥ್ ಶಿರೂರ್ – ಪ್ಯಾರಾ ಶೂಟಿಂಗ್
 • ಸುಜೀತ್ ಮಾನ್ – ಕುಸ್ತಿ

2022ರ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಪಡೆದ ಕ್ರೀಡಾಪಟುಗಳು

 • ದಿನೇಶ್ ಜವಾಹರ್ ಲಾಡ್ -ಕ್ರಿಕೆಟ್
 • ಬಿಮಲ್ ಪ್ರಫುಲ್ಲ ಘೋಷ್ – ಫುಟ್‌ಬಾಲ್
 • ರಾಜ್ ಸಿಂಗ್ – ಕುಸ್ತಿ

LEAVE A REPLY

Please enter your comment!
Please enter your name here