“ಮೋದಿ ಮತ್ತೆ ಅಧಿಕಾರಕ್ಕೆ ಬರೋಲ್ಲ” ..ಪ್ರಕಾಶ್ ರೈ

ಚಿತ್ರದುರ್ಗ: ಚಿತ್ರದುರ್ಗದ ಭೋವಿ ಮಠಕ್ಕೆ ಬೇಟಿನೀಡಿದ ಪ್ರಕಾಶ ರೈ ಸುದ್ದಿಗಾರರೊಂದಿಗೆ ಮಾತನಾಡುತ್ತ, ನರೇಂದ್ರ ಮೋದಿ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ. ಬಡವರ ಉದ್ದಾರಕ್ಕಾಗಿ ಕೇವಲ ಜಸ್ಟ್ ಆಸ್ಕಿಂಗ್ ಅಭಿಯಾನ ಸಾಳುವುದಿಲ್ಲಾ ಹಾಗಾಗಿ ನಾನು ಈ ಬಾರಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದೇನೆ ಎಂದರು.

ದೇಶದ ಎಲ್ಲಾ ಪಕ್ಷಗಳು ಹೈಕಮಾಂಡ್ ಹೇಳಿದಂತೆ ಕೇಳಿಕೊಂಡು ತಮ್ಮ ತಮ್ಮ ಬೆಳೆಬೇಯಿಸಿಕೊಳ್ಳುತ್ತಿದ್ದಾರೆ. ಬಡವರ ಮತ್ತು ಶೋಷಿತ ವರ್ಗದ ಅಳಲನ್ನು ಕೇಳುವವರು ಯಾರು ಇಲ್ಲವಾಗಿದ್ದಾರೆ. 10% ಮೀಸಲಾತಿಯ ಕುರಿತು ಮಾತನಾಡಿದ ಅವರು ಮೋದಿಯವರು ಬಡವರಿಗೆ 10% ಮಿಸಲಾತಿ ನೀಡುವ ಬದಲು ಉದ್ಯೋಗ ನೀಡಬೇಕು ಎಂದರು.

ಇದನ್ನೂ ಓದಿರಿ : ಪ್ರಿಯಾಂಕಾ ರಾಜಕೀಯ ಪ್ರವೇಶ: “ಕುಟುಂಬಕ್ಕೆ ಮೊದಲ ಆದ್ಯತೆ ನೀಡೋದೇ ಕಾಂಗ್ರೆಸ್ ಸಂಸ್ಕೃತಿ”

ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಬಂದಿರುವ ಕುರಿತು ಮಾತನಾಡುತ್ತ, ಒಬ್ಬ ಹೆಣ್ಣುಮಗಳು ರಾಜಕೀಯಕ್ಕೆ ಬಂದಿದ್ದಾರೆ ಒಳ್ಳೆಯದು, ಅವರು ಗಾಂಧಿ ಕುಟುಂಬದಲ್ಲಿ ಹುಟ್ಟಿದ್ದೇ ತಪ್ಪಾ ಎಂದು ಮೋದಿಯವರ ಹೇಳಿಕೆಗೆ ತಿರುಗೇಟು ನೀಡಿದರು. ಅಲ್ಲದೇ ಈ ಬಾರಿ ಮತ್ತೆ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವುದಿಲ್ಲಾ ಎಂದು ನಾನು ಹೇಳುತ್ತಿದ್ದೇನೆ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿರಿ : ದೇಹದ ತೂಕವನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳುವುದು ಹೇಗೆ..?

Image Copyright : google.com

LEAVE A REPLY

Please enter your comment!
Please enter your name here