ಪವರ್ ಸ್ಟಾರ್ ಪುನೀತ್ ರ ಹೊಸ ಚಿತ್ರದ ಪೋಸ್ಟರ್ ರಿಲೀಸ್ !

power-star-puneets-new-movie-poster-release

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನಸಿನ ಡಾಕ್ಯುಮೆಂಟರಿ ಚಿತ್ರದ ಟೈಟಲ್ ಟೀಸರ್ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದೆ. ಪಿ ಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ಸಾಕಷ್ಟು ವಿಭಿನ್ನ ಸಿನಿಮಾಗಳನ್ನು ಮಾಡಲು ಬಯಸಿದ್ದ ಅಪ್ಪು, ಕರ್ನಾಟಕದ ಬಗ್ಗೆ ಮಾಡಿದ್ದ ಡಾಕ್ಯುಮೆಂಟರಿ ಟೈಟಲ್ ಟೀಸರ್ ಡಿಸೆಂಬರ್ 6 ಕ್ಕೆ ರಿಲೀಸ್ ಆಗಲಿದೆ ಎಂಬ ಸುದ್ದಿ ಹೊರಬಿದ್ದಿದೆ.

ಪುನೀತ್ ರಾಜಕುಮಾರ್ ಅವರು ಕನ್ನಡ ರಾಜ್ಯೋತ್ಸವದಂದು ಟೀಸರ್ ರಿಲೀಸ್ ಮಾಡಲು ತಯಾರಿ ನಡೆಸಿದ್ದರು ಎನ್ನಲಾದ ವೈಲ್ಡ್ ಕರ್ನಾಟಕ ಡಾಕ್ಯುಮೆಂಟರಿ ಚಿತ್ರದ ಪೋಸ್ಟರ್ ಇದೀಗ ಬಿಡುಗಡೆ ಮಾಡಲು ಕುಟುಂಬ ಸಿದ್ಧತೆ ನಡೆಸಿದೆ. ಈ ವಿಚಾರ ಅವರ ಅಭಿಮಾನಿಗಳಲ್ಲಿ ಸಂತಸ ಹೆಚ್ಚಿಸಿದ್ದು, ಪುನೀತ್ ರನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿರಿ: ಚಂದನವನದ ಹಿರಿಯ ನಟ ಶಿವರಾಮ್ ತಲೆಗೆ ಬಲವಾದ ಪೆಟ್ಟು, ಐಸಿಯುನಲ್ಲಿ ಚಿಕಿತ್ಸೆ !

ಕರ್ನಾಟಕದ ಅರಣ್ಯದಲ್ಲಿ ಅಮೋಘ ವರ್ಷ ಅವರ ಜೊತೆಯಲ್ಲಿ ಪುನೀತ್ ಒಂದು ಡಾಕ್ಯುಮೆಂಟರಿ ಚಿತ್ರವನ್ನು ನಿರ್ಮಿಸಿದ್ದರು. ಇದರಲ್ಲಿ ಕರ್ನಾಟಕದ ವಿವಿಧ ಪ್ರದೇಶಗಳಿಗೆ ಭೇಟಿನೀಡಿ, ಅಲ್ಲಿನ ಪ್ರಕೃತಿಯ ಮಡಿಲಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು ಪುನೀತ್ ಅವರು ಅಮೋಘ ವರ್ಷ ಜೊತೆಯಲ್ಲಿ ಸ್ಕೂಬಾ ಡೈಯಿಂಗ್ ಮಾಡುತ್ತಿರುವ ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

power-star-puneets-new-movie-poster-release

ವಿಶೇಷ ಆಸಕ್ತಿ ವಹಿಸಿ ಈ ವೈಲ್ಡ್ ಡಾಕ್ಯುಮೆಂಟ್ ಚಿತ್ರವನ್ನು ಪುನೀತ್ ನಿರ್ಮಿಸಿದ್ದರು. ಅಲ್ಲದೇ ಇದಕ್ಕೆ ‘ಗಂಧದಗುಡಿ’ ಎಂದು ಹೆಸರಿಡಲು ಬಯಸಿದ್ದರು ಎಂದು ಹೇಳಲಾಗಿದೆ. ಇದರ ಟೀಸರ್ ನವೆಂಬರ್ 1 ರಂದೇ ರಿಲೀಸ್ ಆಗಬೇಕಿತ್ತು, ಇದು ಪುನೀತ್ ಅವರ ಕನಸಾಗಿತ್ತು. ಸದ್ಯ ಈ ಚಿತ್ರದ ಪೋಸ್ಟರ್ ಡಿಸೆಂಬರ್ 6 ಕ್ಕೆ ರಿಲೀಸ್ ಆಗುತ್ತಿದ್ದು, “ಅಪ್ಪು ಅಮೋಘ ಕನಸಿನ ಪಯಣ, ಹಿಂದೆಂದೂ ಕಾಣದ ರೋಮಾಂಚಕ ಅನುಭವ” ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here