postmen-to-now-home-deliver-ayurvedic-concoction-for-covid-immunity

ಬೆಂಗಳೂರು: ಕೊವಿಡ್-19 ರೋಗ ತಡೆಗೆ ಬಹಳಷ್ಟು ಜನರು ಆಯುರ್ವೇದದ ಮೊರೆ ಹೋಗಿದ್ದು, ಇನ್ನು ಮುಂದೆ ಪ್ರತಿರೋಧಕ ಕಷಾಯದ ಕಿಟ್ ನಿಮ್ಮ ಮನೆಗೆ ತಲುಪಿಸಲು ಅಂಚೆಯ ಅಣ್ಣ ಬರಲಿದ್ದಾನೆ. ಹೌದು ನೀವು ಓದುತ್ತಿರುವುದು ನಿಜ..! ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಈ ಸಾಹಸಕ್ಕೆ ಕೈ ಹಾಕಿದ್ದು, ಎಲ್ಲರ ಮನೆ ಮನೆಗೆ ಪ್ರತಿರೋಧಕ ಕಷಾಯದ ಕಿಟ್ ತಲುಪಿಸುವ ಪ್ರಯತ್ನ ಮಾಡಲಿದೆ. ಈ ಪ್ರತಿರೋಧಕ ಕಿಟ್ ಪಡೆಯಲು ಏನೇನು ಮಾಡಬೇಕು ಎನ್ನುವುದನ್ನು ತಿಳಿಯಲು ಮುಂದೆ ಓದಿರಿ..

ಇದೇ ರೀತಿ ಈ ಬಾರಿ ಮಾವು ಅಭಿವೃದ್ದಿ ಮತ್ತು ಮಾರಾಟ ನಿಗಮವು ಕರ್ನಾಟಕದಲ್ಲಿ ಮಾವಿನ ಹಣ್ಣನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನವನ್ನು ಮಾಡಿತ್ತು. ಅದು ಭಾಗಶಃ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಬಾರಿ ಆಯುರ್ವೇದದ ಕಷಾಯವನ್ನು ರಾಜ್ಯದಲ್ಲಿ ವಿತರಿಸಲು ಮುಂದಾಗಿದೆ.

ಜನಸಾಮಾನ್ಯರ ಆರೋಗ್ಯವನ್ನು ವೃದ್ಧಿಸುವ ದೃಷ್ಟಿಯಿಂದ ವಿವಿಧ ಕಷಾಯ ಮಾಡಬಲ್ಲ ಆಯುರ್ವೇದದ ಔಷಧಗಳನ್ನು ಮನೆ ಮನೆಗೆ ತಲುಪಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಈ ಕಿಟ್ ನಲ್ಲಿ ನೇರವಾಗಿ ವಿವಿಧ ರೈತರಿಂದ ಕರೀದಿಸಲ್ಪಟ್ಟ ವಸ್ತುಗಳು ಇರಲಿವೆ.

ಮುಂದಿನ ವಾರದಿಂದ ಪ್ರಾರಂಭವಾಗಲಿರುವ ಈ ಸೌಲಭ್ಯದಲ್ಲಿ ಕಷಾಯದ 3 ಕೆಜಿ ಪ್ಯಾಕೆಟ್ ಕೊಳ್ಳಲು 600 ದರ ನಿಗದಿ ಮಾಡಿದ್ದು, KSMDMC ರವರ ಅಧಿಕೃತ ವೆಬ್ ತಾಣ https://karsirimangoes.karnataka.gov.in ಬೇಟಿ ನೀಡಿ ಬುಕ್ ಮಾಡಬಹುದಾಗಿದೆ. ಆರ್ಡರ್ ಬಂದ ಕಿಟ್ ಗಳನ್ನು ಪೋಸ್ಟ್ ಸರ್ವೀಸ್ ಮೂಲಕ ನಿಮ್ಮ ಮನೆ ಮನೆಗೆ ತಲುಪಿಸಲು ಮುಂದಾಗಿದೆ. ಈ ಔಷಧಗಳನ್ನು ಕಷಾಯಮಾಡಿ ಕುಡಿಯುವುದರಿಂದ ಕೊರೊನಾ ಸೋಂಕು ಮಾತ್ರವಲ್ಲದೆ ಸಾಮಾನ್ಯ ಜ್ವರ, ಶೀತ, ಕೆಮ್ಮು, ನೆಗಡಿ ವಿರುದ್ದ ಹೋರಾಡುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಲಿದೆ.

LEAVE A REPLY

Please enter your comment!
Please enter your name here