ಉತ್ತರಾಖಂಡ್ ಹೈಕೋರ್ಟ್ ನ ನಿರ್ದೇಶನದಂತೆ ಕೇಂದ್ರ ಸರಕಾರ 827 ಪೋರ್ನ್ ಸೈಟ್ ಗಳನ್ನೂ ಬ್ಲಾಕ್ ಮಾಡುವಂತೆ ಆದೇಶ ಟೆಲಿಕಾಂ ಕಂಪನಿಗಳಿಗೆ ಆದೇಶ ನೀಡಿತ್ತು. ಈಗಾಗಲೇ ಮುಖೇಶ ಅಂಬಾನಿ ಮಾಲೀಕತ್ವದ ಜಿಯೋತನ್ನ ಗ್ರಾಹಕರು ಪೋರ್ನ್ ಸೈಟ್ ವೀಕ್ಷಣೆ ಮಾಡುವುದನ್ನು  ನಿರ್ಬಂಧಿಸಿತ್ತು. ಆದರೆ ಉಳಿದ ಟೆಲಿಕಾಂ ಸಂಸ್ಥೆಗಳು ಈ ಸಂಬಂಧ ಇನ್ನು ನಿರ್ಧಾರ ಕೈಗೊಂಡಿಲ್ಲ. 

ಜಿಯೋ ಹೊರತುಪಡಿಸಿ ಉಳಿದ ಟೆಲಿಕಾಂ ಕಂಪನಿಗಳು ಇನ್ನು ಪೋರ್ನ್ ಸೈಟುಗಳಿಗೆ ನಿರ್ಬಂಧ ಹೇರದ ಕುರಿತು ಕಾರಣ ಕೇಳಿ ನೋಟಿಸ್ ಕೇಂದ್ರ ಸರಕಾರ ಹೊರಡಿಸಿದೆ. ಕೇಂದ್ರ ಸರಕಾರಕ್ಕೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಹೈಕೋರ್ಟ್ ನ ನಿರ್ದೇಶನ ಪಾಲಿಸುತ್ತಿದೆ. ಕೇಂದ್ರ ಸರಕಾರ ಅಶ್ಲೀಸ ಚಿತ್ರ ವೀಕ್ಷಣೆಯನ್ನು ಸಂಪೂರ್ಣ ಬ್ಯಾನ್ ಮಾಡಲು ಸಾಧ್ಯವಾಗುವುದೇ ಕಾಡು ನೋಡಬೇಕಿದೆ. 

ಅಧ್ಯಯನವೊಂದರ ಪ್ರಕಾರ ಭಾರತ ವಿಶ್ವದ ಅತಿ ಹೆಚ್ಚು ಪೋರ್ನ್ ವೀಕ್ಷಿಸಿದ ದೇಶಗಳಲ್ಲಿ 3 ನೇ ಸ್ಥಾನ ಪಡೆದಿದೆ. ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಪ್ರಮಾಣ ಹೆಚ್ಚಾದಂತೆ ಪೋರ್ನ್ ವೀಕ್ಷಕರ ಸಂಖ್ಯೆಯು ಹೆಚ್ಚಾಗುತ್ತಿದೆ. ಮೊಳದಳ ಸ್ಥಾನವನ್ನು ಅಮೇರಿಕ ಪಡೆದುಕೊಂಡರೆ, ಇಂಗ್ಲೆಂಡ್ ಎರಡೆನೆಯ ಸ್ಥಾನದಲ್ಲಿದೆ. 2015 ರಲ್ಲಿ ಭಾರತವು 6 ನೇ ಸ್ಥಾನ ಪಡೆದುಕೊಂಡಿತ್ತು. 

ಭಾರತದಲ್ಲಿ ಪುರುಷರು ಅಶೀಲ ಜಾಲತಾಣಗಳನ್ನು ಸರಾಸರಿ 9 ನಿಮಿಷ ಮತ್ತು 22 ಸೆಕೆಂಡ್ ಗಾಲ ಕಾಲ ವೀಕ್ಷಿಸಿದರೆ, ಮಹಿಳೆಯರು ಸರಾಸರಿ 9 ನೀಮಿಷ ಮತ್ತು 36 ಸೆಕೆಂಡ್ ಗಳಕಾಲ ನೋಡಿದ್ದಾರೆ. ಭಾರತದಲ್ಲಿ ಶೇಕಡಾ 30 ರಷ್ಟು ಮಹಿಳೆಯರು ಪೋರ್ನ್ ವೆಬ್ ಸೈಟ್ ಗಳನ್ನೂ ವೀಕ್ಷಿಸುತ್ತಾರೆ ಎಂಬ ಮಾಹಿತಿಯನ್ನು ಈ ವರದಿ ಹೊರಗೆಡವಿದೆ. 

ಪೋರ್ನ್ ವೀಕ್ಷಣೆಯು ಆರೋಗ್ಯದ ಮೇಲೆ ಅನೇಕ ತೊಂದರೆಗಳನ್ನು ಉಂಟುಮಾಡುವುದಲ್ಲದೆ ನೆನಪಿನ ಶಕ್ತಿಯ ಕೊರತೆ, ಬುದ್ದಿ ಬೆಳವಣಿಗೆಯಲ್ಲಿ ಕೊರತೆ, ಡೇಟಾ ಹ್ಯಾಕಿಂಗ್, ಅತ್ಯಾಚಾರಗಳಂತಹ ಅನೇಕ ತೊಂದರೆಗಳು ಈ ಸಮಾಜದಲ್ಲಿ ಉಂಟಾಗುತ್ತವೆ ಎಂದು ಅನೇಕ ವರದಿಗಳಿಂದ ಹೊರಬಂದಿದೆ.

Image Copyright: google.com

LEAVE A REPLY

Please enter your comment!
Please enter your name here