ಬೆಂಗಳೂರು: ರಾಜ್ಯದಲ್ಲಿ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಸ್ಯಾಂಟ್ರೋ ರವಿಯ ಪತ್ನಿಯ ಮನೆ ಮೇಲೆ ಪೋಲೀಸರ ವಿಶೇಷ ತಂಡವೊಂದು ದಾಳಿ ನಡೆಸಿದ್ದು, ಡೈರಿ, ಗ್ಯಾಸ್ ಬಿಲ್ ವಶಕ್ಕೆ ಪಡೆದಿದ್ದಾರೆ.
ವೇಶ್ಯಾವಾಟಿಕೆ, ವರ್ಗಾವಣೆ ದಂದೆ ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಮೈಸೂರು ಮೂಲದ ಕೆ ಎಸ್ ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ ಬಂಧನಕ್ಕೆ ವಿಶೇಷ ಪೋಲೀಸರ ತಂಡ ರಚಿಸಲಾಗಿದ್ದು, ತನಿಖೆ ತೀವ್ರಗೊಳಿಸಿದೆ.
ಸ್ಯಾಂಟ್ರೋ ರವಿಯ ಪತ್ನಿಯ ರಾಜರಾಜೇಶ್ವರಿ ನಗರದ ನಿವಾಸಕ್ಕೆ ಇಂದು ವಿಶೇಷ ಪೊಲೀಸ್ ಪಡೆಯ 30 ಸಿಬ್ಬಂದಿ ಏಕಾಏಕಿ ದಾಳಿ ಮಾಡಿದ್ದು, ಶೋಧ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಡೈರಿ ಮತ್ತು ಗ್ಯಾಸ್ ಬಿಲ್ ಗಳು ಸೇರಿದಂತೆ ಕೆಲ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿರಿ: ಬೆಳಗಾವಿಯಲ್ಲಿ ಪ್ರಜಾಧ್ವನಿ ಕಾಂಗ್ರೆಸ್ ಬಸ್ ಯಾತ್ರೆಗೆ ಚಾಲನೆ