poet-ks-nisar-ahmed-passed-away

ಹಿರಿಯ ಸಾಹಿತಿ ‘ಜೋಗದ ಸಿರಿ ಬೆಳಕಿನಲ್ಲಿ ‘ ಖ್ಯಾತಿಯ ಪ್ರೊಪೆಸರ್ ಕೆಎಸ್ ನಿಸಾರ್ ಅಹಮ್ಮದ್ ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಇಂದು (ಮೇ 3) ಕೊನೆಯುಸಿರೆಳೆದಿದ್ದಾರೆ.

ಇವರು 1936 ರಲ್ಲಿ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ದೇವನಹಳ್ಳಿಯಲ್ಲಿ ಪಡೆದ ಇವರು ಹೊಸಕೋಟೆಯಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದರು. ನಂತರ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಭೂಗರ್ಭ ಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ನಂತರ ಎಂ ಎಸ್ ಸಿ ಪದವಿ ಪಡೆದು ಕಾಲೇಜು ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು.

ಇವರು ತಮ್ಮ 10 ನೇಯ ವಯಸ್ಸಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದು, ಹಲವು ಪ್ರಕ್ಯಾತ ಕೃತಿಗಳನ್ನು ಹೊರತಂದಿದ್ದಾರೆ. ಮನಸು ಗಾಂಧಿ ಬಜಾರು(1960), ನೆನೆದವರ ಮನದಲ್ಲಿ(1964), ಸುಮಹೂರ್ತ(1967), ಸಂಜೆ ಐದರ ಮಳೆ(1970), ನಾನೆಂಬ ಪರಕೀಯ(1972), ಆಯ್ದ ಕವಿತೆಗಳು(1974), ಸ್ವಯಂ ಸೇವೆಯ ಗಿಳಿಗಳು(1977), ಅನಾಮಿಕ ಆಂಗ್ಲರು(1982), ಬರಿರಂತರ(1990), ಸಮಗ್ರ ಕವಿತೆಗಳು(1991), ನವೋಲ್ಲಾಸ(1994), ಆಕಾಶಕ್ಕೆ ಸರಹದ್ದುಗಳಿಲ್ಲ(1998), ಅರವತ್ತೈದರ ಐಸಿರಿ(2001), ಸಮಗ್ರ ಭಾವಗೀತೆಗಳು(2001),ಪ್ರಾತಿನಿಧಿಕ ಕವನಗಳು(2002), ನೋತ್ಯೋತ್ಸವ ಹೀಗೆ ಹಲವಾರು ಕವನ ಸಂಕಲನಗಳನ್ನು ರಚಿಸಿದ್ದಾರೆ.

ಇದನ್ನೂ ಓದಿರಿ:SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ..!



ಇವರ ಸಾಹಿತ್ಯಾಸಕ್ತಿಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ಅನಕೃ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪಂಪ ಪ್ರಶಸ್ತಿ, 1981ರ ರಾಜ್ಯೋತ್ಸವ ಪ್ರಶಸ್ತಿ, 2003ರ ನಾಡೋಜ ಪ್ರಶಸ್ತಿ, 2006ರ ಅರಸು ಪ್ರಶಸ್ತಿ, 2006ರ ಮಾಸ್ತಿ ಪ್ರಶಸ್ತಿ ಸೇರಿದಂತೆ ಇನ್ನೂ ಹಲವಾರು ಪ್ರಶಸ್ತಿಗಳು ಸಂದಿವೆ.

 

LEAVE A REPLY

Please enter your comment!
Please enter your name here