pmmodi-turns-70-wishes-pour-in-from-all-corners

ನವದೆಹಲಿ: ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇಂದು 70 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಮತ್ತು ವಿದೇಶಿ ವಿವಿಧ ಗಣ್ಯರು ಶುಭಾಷಯ ಕೋರಿದ್ದಾರೆ.

ಮೋದಿಯವರ ಜನ್ಮದಿನದ ಪ್ರಯುಕ್ತ ಶುಭಾಷಯದ ಮಹಾ ಪೂರವೇ ಹರಿದು ಬಂದಿದ್ದು, ಇವರಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹ ಒಬ್ಬರು. ಈ ಶುಭ ಗಳಿಗೆಯಲ್ಲಿ ಪ್ರಧಾನಿಯವರಿಗೆ ಪತ್ರವೊಂದನ್ನು ಬರೆದಿರುವ ಅವರು, “ಭಾರತದ ಪ್ರಧಾನಿಯಾಗಿ ನೀವು ಮಾಡಿದ ಸಾಧನೆ ಅಂತರಾಷ್ಟ್ರೀಯ ಮಟ್ಟದ ಗೌರವಕ್ಕೆ ಅರ್ಹವಾದದ್ದು. ನಿಮ್ಮ ನಾಯಕತ್ವದಲ್ಲಿ ಭಾರತ ಆರ್ಥಿಕ, ಸಾಮಾಜಿಕ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ಬುತ ಸಾಧನೆಯನ್ನು ಮಾಡಿದೆ. ಭಾರತ ರಷ್ಯಾ ನಡುವಿನ ಶತಮಾನಗಳಷ್ಟು ಹಳೆಯದಾದ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಗೊಳಿಸಲು ಶ್ರಮಿಸಿದ ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅಭಿವೃದ್ಧಿ ಮತ್ತು ಶಾಂತಿ ಸ್ಥಾಪನೆಗಾಗಿ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.

ಇನ್ನು ನೇಪಾಲದ ಪ್ರಧಾನಿ ಕೆಪಿ ಶರ್ಮಾ ಓಲಿ ಸಹ ಶುಭಾಷಯ ಕೋರಿದ್ದು, “ಪ್ರಧಾನಿ ನರೇಂದ್ರ ಮೊದಿಜಿಯವರಿಗೆ ಆತ್ಮೀಯ ಶುಭಾಶಯಗಳು. ನಿಮ್ಮ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ಭಯಸುತ್ತೇನೆ. ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹೆಚ್ಚಿಸಲು ಒಟ್ಟಿಗೆ ಕೆಲಸ ಮಾಡೋಣ” ಎಂದು ಹೇಳಿದ್ದಾರೆ.

ಇನ್ನು ರಾಹುಲ್ ಗಾಂಧಿಯವರು ಸಹ ಶುಭಾಷಯ ಕೋರಿದ್ದು, “ನರೇಂದ್ರ ಮೋದಿಯವರಿಗೆ ಜನ್ಮ ದಿನದ ಶುಭಾಶಯಗಳು” ಎಂದು ಶುಭ ಕೋರಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ಟ್ವಿಟ್ ಮಾಡಿ,” ಜನ್ಮದಿನದ ಶುಭಾಶಯಗಳು ಸರ್, ಉತ್ತಮ ಆರೋಗ್ಯವನ್ನು ಹಾಗು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಸಹ ಶುಭ ಕೋರಿದ್ದು, ” ಶಕ್ತಿಶಾಲಿ, ಆತ್ಮನಿರ್ಭರ ಭಾರತಕ್ಕಾಗಿ ನರೇಂದ್ರ ಮೋದಿಜಿಯವರು ತಮ್ಮ ಜೀವನದ ಅಮೂಲ್ಯ ಸಮಯವನ್ನು ಹಾಕುತ್ತಿದ್ದಾರೆ. ಅಂತಹ ಮಹಾನ್ ನಾಯಕನ ನೇತ್ರತ್ವದಲ್ಲಿ ಕೆಲಸ ಮಾಡಲು ಅವಕಾಶ ದೊರೆತದ್ದು ನನ್ನ ಸೌಭಾಗ್ಯ. ನಾನು ದೇಶದ ಸಾವಿರಾರು ಜನರ ಜೊತೆಗೆ ಸುಧೀರ್ಘ ಮತ್ತು ಆರೋಗ್ಯ ಪೂರ್ಣ ಜೀವನಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವಿಟ್ ಮಾಡಿ,” ನರೇಂದ್ರ ಮೋದಿಯವರ ಚುರುಕಾದ ಮತ್ತು ನಿರ್ಣಾಯಕವಾದ ನಿರ್ಧಾರಗಳಿಂದ ಭಾರತವು ಸಾಕಷ್ಟು ಲಾಭವನ್ನು ಪಡೆದಿದೆ. ಬಡ ಮತ್ತು ಬಡತನ ರೆಕೆಯ ಅಂಚಿನಲ್ಲಿರುವ ಉದ್ಧಾರಕ್ಕಾಗಿ ಹಲವಾರು ಯೋಜನೆಗಳ ಮೂಲಕ ಶ್ರಮಿಸುತ್ತಿರುವ ದೇಶದ ಪ್ರಧಾನಿ ಮೋದಿಯವರಿಗೆ ದಿರ್ಘಾಯುಷ್ಯ ಮತ್ತು ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

ಎಲ್ಲೆಡೆಗಳಿಂದ ಶುಭಾಶಯಗಳ ಮಹಾ ಪೂರ ವೇ ಹರಿದುಬಂದಿದ್ದು, ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರು “‘ಆದರಣೀಯ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರಿಗೆ 70ನೇ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ನವಭಾರತ ನಿರ್ಮಾಣದ ನಿಟ್ಟಿನಲ್ಲಿ ದೃಢಸಂಕಲ್ಪದೊಂದಿಗೆ ಮುನ್ನಡೆಯುತ್ತಿರುವ ತಮಗೆ ದೇವರು ಮತ್ತಷ್ಟು ಶಕ್ತಿಯನ್ನು, ಉತ್ತಮ ಆರೋಗ್ಯವನ್ನು ಹಾಗು ದೀರ್ಘಾಯುಷ್ಯವನ್ನು ದಯಪಾಲಿಸಲಿ” ಎಂದು ಹೇಳಿದ್ದಾರೆ. 

ಇನ್ನು ರಾಜ್ಯದ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ “ವಿಶ್ವ ನಾಯಕ, ದೇಶದ ಹೆಮ್ಮೆಯ ಪ್ರಧಾನಿ, ನಮ್ಮ ಪ್ರೇರಣಾ ಶಕ್ತಿ ಶ್ರೀ ನರೇಂದ್ರ ಮೋದಿಜಿಯವರಿಗೆ ಜನ್ಮದಿನದ ಶುಭಾಶಯಗಳು” ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here