ನವದೆಹಲಿ: ಎರಡನೆಯ ಕೊರೋನಾ ಹೊಡೆತದಿಂದಾಗಿ ದೇಶದ ಆರ್ಥಿಕ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಈ ಸಂಕಷ್ಟದ ನಡುವೆಯೇ ಕೇಂದ್ರ ರೈತರ ಕಿಸಾನ್ ಸಮ್ಮಾನ್ ನಿಧಿಯ 8 ನೇಯ ಕಂತನ್ನು ಮೇ 14 ರಂದು ಬಿಡುಗಡೆ ಮಾಡಲಿದ್ದಾರೆ.
ಆರ್ಥಿಕ ಸಂಕಷ್ಟದ ನಡುವೆಯೂ ಪ್ರಧಾನಿಯವರು ಮೇ 14 ರಂದು “ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ” ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಕೃಷಿ ಕ್ಷೇತ್ರಕ್ಕೆ 2000 ಬಂಪರ್ ನೀಡಲು ಹೊರಟಿದ್ದಾರೆ. ಸದ್ಯ ಮುಂಗಾರು ಪ್ರಾರಂಭವಾಗಲಿದ್ದು, ಸಂಕಷ್ಟದಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಹಾಯವಾಗಲಿದೆ. ಶುಕ್ರವಾರ ನಡೆಯಲಿರುವ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ನಂತರ ಯೋಜನೆಯ ಮೊತ್ತ ವರ್ಗಾವಣೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಪರಿಶೀಲಿಲನೆ ಮಾಡುವುದು ಹೇಗೆ ?
ನರೇಂದ್ರ ಮೋದಿಯವರು ಪ್ರಾರಂಭಿಸಿದ “ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ” ಫಲಾನುಭವಿಗಳ ಲಿಸ್ಟನ್ನು ನೋಡುವುದು ಹೇಗೆ ಎಂಬ ಅನುಮಾನ ನಿಮ್ಮನ್ನು ಕಾಡಿದ್ದರೆ ಅದಕ್ಕೆ ಇಲ್ಲಿದೆ ಉತ್ತರ. ಹೌದು .. ನೀವು ನಿಮ್ಮ ಮೊಬೈಲ್ ಮೂಲಕವೂ ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ ಎಂದು ನೋಡಬಹುದಾಗಿದೆ. ಇದನ್ನು ತಿಳಿಯಲು PM kisan.gov.in ಗೆ ಭೇಟಿ ನೀಡಬೇಕು. ಇಲ್ಲಿ ನಿಮಗೆ ಕಾಣುವ Farmers Corner ಲಿಸ್ಟಿನಲ್ಲಿ ಕಾಣುವ Beneficiary List ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ನಿಮ್ಮ ಬ್ಲಾಕ್ ಮತ್ತು ಹಳ್ಳಿಯನ್ನು ಆಯ್ಕೆ ಮಾಡಿ Get Report ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಮುಂದೆ ನಿಮ್ಮ ಊರಿನಲ್ಲಿ ಲಭ್ಯವಾಗಿರುವ ಫಲಾನುಭವಿಗಳ ಲಿಸ್ಟ್ ನೋಡಬಹುದಾಗಿರುತ್ತದೆ.