ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ಮತ್ತು ಲಾಕ್ ಡೌನ್ ನಿಂದಾಗಿ ಬೀದಿ ಬದಿಯ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಮೋದಿ ಸರಕಾರ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಬೀದಿ ವ್ಯಾಪಾರಿಗಳಿಗೆ ಪಿ.ಎಂ. ಸ್ವನಿಧಿ ಯೋಜನೆ (PM Svanidhi Scheme) ಯ ಮೂಲಕ ಸರ್ಕಾರ ಯಾವುದೇ ಜಾಮೀನು ಇಲ್ಲದೇ ರೂ.10,000 ರಿಂದ ರೂ.50,000 ಸಾಲ ನೀಡುತ್ತದೆ. ಬೀದಿ ವ್ಯಾಪಾರಿಗಳಿಗೆ ಸಹಾಯ ಮಾಡಲು ಸರ್ಕಾರವು 2020 ರಲ್ಲಿ ಈ ಯೋಜನೆಯನ್ನ ಪ್ರಾರಂಭಿಸಿತು. ಇದೀಗ ಈ ಯೋಜನೆಯಲ್ಲಿ ದೊಡ್ಡ ಬದಲಾವಣೆ ತರಲು ಸರ್ಕಾರ ಮುಂದಾಗಿದೆ.
ಪಿ.ಎಂ. ಸ್ವನಿಧಿ ಯೋಜನೆನ್ನು ಕೇಂದ್ರ ಸರಕಾರ 2020 ರಲ್ಲಿ ಆರಂಭಿಸಿದ್ದು, ಇಲ್ಲಿಯವರೆಗೆ 12 ಲಕ್ಷಕ್ಕೂ ಅಧಿಕ ಜನರಿಗೆ ಸಾಲವನ್ನು ಒದಗಿಸಲಾಗಿದೆ. ಇದೀಗ ಕೇಂದ್ರ ಸರಕಾರ ಆರಂಭಿಕ 10 ಸಾವಿರ ಸಾಲವನ್ನ 20 ಸಾವಿರಕ್ಕೆ ಹೆಚ್ಚಿಸಲು ಚಿಂತನೆ ನಡೆಸಲಾಗುತ್ತಿದೆ. ಈ ಕುರಿತಂತೆ ಕೇಂದ್ರ ಸರಕಾರ ಬ್ಯಾಂಕುಗಳ ಜೊತೆಯಲ್ಲಿ ಮಾತುಕತೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಯಾವುದೇ ಭದ್ರತೆ ನೀಡುವ ಅಗತ್ಯವಿಲ್ಲ
ಪಿ.ಎಂ. ಸ್ವನಿಧಿ ಯೋಜನೆಯ ಮೂಲಕ ಸಾಲವನ್ನು ಪಡೆದುಕೊಳ್ಳಲು ಬೀದಿ ವ್ಯಾಪಾರಿಗಳು ಯಾವುದೇ ಭದ್ರತೆಯನ್ನು ಒದಗಿಸುವ ಅಗತ್ಯತೆ ಇರುವುದಿಲ್ಲ. ಇಲ್ಲಿ ಅಗತ್ಯ ದಾಖಲೆಗಳೊಂದಿಗೆ ವ್ಯಾಪಾರಿಗಳು ಅರ್ಜಿಯನ್ನು ಸಲ್ಲಿಸಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಬೀದಿ ಬದಿಯಲ್ಲಿ ವ್ಯಾಪಾರ ನಡೆಸುವ ವ್ಯಕ್ತಿಗೆ ಮೊದಲ ಬಾರಿಗೆ 10,000 ಸಾಲವನ್ನು ಒದಗಿಸಲಾಗುತ್ತದೆ. ಒಂದು ವರ್ಷದೊಳಗೆ ತಾನು ತೆಗೆದುಕೊಂಡ ಸಾಲವನ್ನು ಮರುಪಾವತಿಸಿದರೆ ಎರಡನೆಯ ಬಾರಿಗೆ 20,000 ಮೊತ್ತಕ್ಕೆ ಅರ್ಹತೆಯನ್ನು ಪಡೆದುಕೊಳ್ಳುತ್ತಾನೆ. ಸರಿಯಾದ ಮರುಪಾವತಿಯ ನಂತರ ಮೂರನೆಯ ಅವಧಿಗೆ 50,000 ಪಡೆದುಕೊಳ್ಳಬಹುದಾಗಿದೆ. ಈ ಸಾಲ ಯೋಜನೆಯಲ್ಲಿ ಶೇ. 7 ರ ಬಡ್ಡಿದರದಲ್ಲಿ ಸಾಲವನ್ನು ಪೂರೈಸಲಾಗುತ್ತಿದೆ.
ಏನೇನು ದಾಖಲೆಗಳು ಅಗತ್ಯವಿದೆ ?
ವ್ಯಾಪಾರಿಗಳು ಈ ಯೋಜನೆಯ ಸಾಲವನ್ನು ಪಡೆದುಕೊಳ್ಳಲು, ತಾನು ವ್ಯಾಪಾರ ಮಾಡುತ್ತಿರುವ ಕುರಿತಂತೆ ಸರ್ಟಿಫಿಕೇಟ್ ಅಥವಾ ವ್ಯಾಪಾರಿ ಗುರುತಿನ ಪತ್ರ, ತಾವು ವ್ಯಾಪಾರ ನಡೆಸುತ್ತಿರುವ ಪ್ರವಿಶನಲ್ ಸರ್ಟಿಫಿಕೇಟ್ ಅಥವಾ ಶಿಫಾರಸು ಪತ್ರ ಅಗತ್ಯವಾಗಿ ಬೇಕಾಗುತ್ತದೆ. ಇದರೊಂದಿಗೆ ಆ ವ್ಯಕ್ತಿಯ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕಾಗುತ್ತದೆ. 2020 ಮಾರ್ಚ್ 24 ರ ವೇಳೆಯಲ್ಲಿ ಅಥವಾ ಅದಕ್ಕಿಂತಲೂ ಮೊದಲು ವ್ಯಾಪಾರವನ್ನು ಮಾಡಿಕೊಂಡಿರುವವರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಇದನ್ನೂ ಓದಿರಿ: ತಂದೆಯ ಜೀವ ರಕ್ಷಿಸಿ ಸಾಹಸ ಮೆರೆದ ಬಾಲಕಿಗೆ ಶೌರ್ಯ ಪ್ರಶಸ್ತಿ !
ಯೋಜನೆಯ ಪ್ರಮುಖ ಅಂಶಗಳು
- ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ.
- ಪಿ.ಎಂ. ಸ್ವನಿಧಿ ಸಾಲ ಯೋಜನೆಯ ಅವಧಿಯು ಒಂದು ವರ್ಷದ್ದಾಗಿರುತ್ತದೆ.
- ಡಿಜಿಟಲ್ ವಹಿವಾಟಿಗೆ ವಿಶೇಷ ರಿಯಾಯಿತಿ ಮತ್ತು ಪ್ರೋತ್ಸಾಹಧನ ದೊರೆಯುತ್ತದೆ.
- ಯಾವುದೇ ಸಾಲ ಪಡೆಯಲು ಮೇಲಾಧಾರ ಭದ್ರತೆಯ ಅವಶ್ಯಕೆಯಿರುವುದಿಲ್ಲ.
- ಸರಿಯಾದ ಸಮಯದಲ್ಲಿ ಮರುಪಾವತಿ ಮಾಡಿದರೆ ಶೇ. 7 ಬಡ್ಡಿ ಸಬ್ಸಿಡಿ, ತ್ರೈಮಾಸಿಕ ಪಾವತಿಗೂ ಅವಕಾಶ
- ಮೊದಲ ಸಮಯೋಜಿತ ಪಾವತಿ/ ಶೀಘ್ರ ಪಾತಿಯ ಮೇಲೆ ಸಾಲದ ಅರ್ಹತೆ ಹೆಚ್ಚಿಸಲಾಗುತ್ತದೆ.
- ದೇಶದಾದ್ಯಂತ ನಗರ ಮತ್ತು ಸ್ಥಳೀಯ ಸಂಸ್ಥೆಗಳನ್ನು ಈ ಯೋಜನೆಯು ಒಳಗೊಳ್ಳುತ್ತದೆ
ಅರ್ಜಿ ಸಲ್ಲಿಸುವುದು ಹೇಗೆ ?
ವೆಬ್ ಪೋರ್ಟಲ್ https://pmsvanidhi.mohua.gov.in ಗೆ ಭೇಟಿ ನೀಡಿ ಮತ್ತು Apply Loan for 10K ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮೊಬೈಲ್ ನಂಬರ್ ಮತ್ತು ಆಧಾರ್ ನಂಬರ್ ನಿಂದ ವೆರಿಫೈ ಮಾಡಿಕೊಂಡು, ಅಗತ್ಯ ಮಾಹಿತಿಗಳ ಅಪ್ಲಿಕೇಶ ತುಂಬಬೇಕು.