ಪುಲ್ವಾಮ ದಾಳಿ ವೇಳೆ ಐಎಸ್‌ಐ ಚೀಫ್‌ ಆಗಿದ್ದ ಆಸಿಮ್ ಮುನೀರ್ ಈಗ ಪಾಕ್‌ ಸೇನಾ ಮುಖ್ಯಸ್ಥ

ಪುಲ್ವಾಮ ದಾಳಿ । pm-shehbaz-sharif-picks-former-isi-chief-asim-munir-as-next-army-chief

ಇಸ್ಲಾಮಾಬಾದ್:‌ ಪುಲ್ವಾಮ ದಾಳಿ ವೇಳೆ ಐಎಸ್‌ಐ ಚೀಫ್‌ ಆಗಿದ್ದ ಲೆಫ್ಟಿನೆಂಟ್‌ ಜನರಲ್‌ ಆಸಿಮ್‌ ಮುನೀರ್‌‌ (Asim Munir) ಅವರನ್ನು ಸೇನೆಯ ನೂತನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಜನರಲ್‌ ಖಮರ್‌ ಜಾವೇದ್‌ ಬಾಜ್ವಾ ಅವರು ನವೆಂಬರ್‌ 29 ರಂದು ನಿವೃತ್ತರಾಗುತ್ತಿರುವ ಕಾರಣ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಮುನೀರ್‌ ಅವರನ್ನು ನೂತನ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ.

ಆಸಿಮ್‌ ಮುನೀರ್‌‌ ಪಾಕಿಸ್ತಾನ ಸೇನೆಯಲ್ಲಿ ಜನರಲ್‌ ಖಮರ್‌ ಜಾವೇದ್‌ ಬಾಜ್ವಾ ನಂತರದ ಹಿರಿಯ ಅಧಿಕಾರಿಯಾಗಿದ್ದಾರೆ. ಇವರು ಐಎಸ್‌ಐ ಮತ್ತು ಮಿಲಿಟರಿ ಇಂಟೆಲಿಜೆನ್ಸ್ ಮುಖ್ಯಸ್ಥರಾಗಿ ಅಲ್ಲದೇ ಸೇನೆಯ ಹಲವು ಉನ್ನತ ಹುದ್ದೆಗಳನ್ನು ನಿಭಾಯಿಸಿದ ಅನುಭವವನ್ನು ಹೊಂದಿದ್ದಾರೆ.

ಹಾಲಿ ಸೇನಾ ಮುಖ್ಯಸ್ಥ ಜನರಲ್‌ ಖಮರ್‌ ಜಾವೇದ್‌ ಬಾಜ್ವಾ ಅಧಿಕಾರಾವಧಿ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ಪ್ರಧಾನಿ ಶೆಹಬಾಜ್‌ ಷರೀಫ್‌ (Shehbaz Sharif) ಸಾಂವಿಧಾನಿಕ ಅಧಿಕಾರ ಬಳಸಿ ನೇಮಕ ಮಾಡಿದ್ದಾರೆ.

ಇದನ್ನೂ ಓದಿರಿ: ಜಾಮಾ ಮಸೀದಿಯ ಮಹಿಳಾ ವಿರೋಧಿ ನಡೆ: ಮಹಿಳೆಯರಿಗೆ ಪ್ರವೇಶ ನಿಷೇಧ !

LEAVE A REPLY

Please enter your comment!
Please enter your name here