
ನವದೆಹಲಿ: ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದ ಮೋದಿ, ಸರಕಾರದ ಜನಪರ ಯೋಜನೆಗಳ ಜಾರಿ ಮತ್ತು ವಿರೋಧ ಪಕ್ಷಗಳ ನಡವಳಿಕೆಗಳ ಕುರಿತು ಎಳೆ ಎಳೆಯಾಗಿ ಜನತೆಯ ಮುಂದೆ ಬಿಚ್ಚಿಟ್ಟರು. ನಾವು ನೀಡಿದ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ. ಅಲ್ಲದೆ ಜನತೆಗೆ ಬ್ರಷ್ಟಾಚಾರ ಮುಕ್ತ ಸರಕಾರವನ್ನು ನೀಡಿದ್ದೇವೆ ಎಂದು ಹೇಳಿದರು.
ಐದು ವರ್ಷಗಳ ಕಳಂಕ ರಹಿತ ಆಡಳಿತವನ್ನು ನೀಡಿದ್ದೇವೆ. ನಮ್ಮ ಸರಕಾರ ಬಡವರ ಪರ ಕೆಲಸಗಳನ್ನು ಮಾಡಿದೆ. ಯಾವುದೇ ಸವಾಲುಗಳಿಗೆ ಹೆದರಿ ಓಡಿಹೋಗದೆ, ಬ್ರಷ್ಟಾಚಾರ ಮುಕ್ತ ಸರಕಾರವನ್ನು ನೀದ್ದೇವೆ. ಇಂತಹ ಸರಕಾರದ ಸಾಧನೆಗಳ ಕುರಿತು ಮಾತನಾಡಲು ಹೆಮ್ಮೆ ಎನಿಸುತ್ತಿದೆ ಎಂದರು.
ಇದನ್ನೂ ಓದಿರಿ : ಹುಬ್ಬಳ್ಳಿಯಲ್ಲಿ ಜಯಘೋಷ ಮೊಳಗಿಸಿದ ಮೋದಿ…!
ಇವಿಎಂ ಹ್ಯಾಕ್ ಮಾಡಲಾಗಿದೆ ಎಂದು ದೂರಿದರು, ನ್ಯಾಯಾಂಗದ ಕುರಿತು ಅವಹೇಳನಕಾರಿ ಟೀಕೆಗಳನ್ನು ಮಾಡಿದರು, ದೇಶದ ಸೈನಿಕರನ್ನು ಅವಮಾನಿಸಿದರು ಆದರೆ ನಾವು ಸೈನಿಕರಿಗೆ ಬುಲೆಟ್ ಪ್ರೂಪ್ ಜಾಕೆಟ್, ಹೆಲ್ಮೆಟ್ ಆಧುನಿಕ ಶಸ್ತ್ರಗಳನ್ನು ನೀಡಿದೆವು. ನಿಮ್ಮ 55 ವರ್ಷದ ಆಳ್ವಿಕೆಯಲ್ಲಿ ಲೂಟಿಕೋರರನ್ನು ಸಲಹುತ್ತ ಬಂದಿರಿ. ಇಷ್ಟೆಲ್ಲ ಇದ್ದು ವಿಪರ್ಯಾಸವೆಂದರೆ ಕಳ್ಳರೇ ಇಂದು ಚೌಕಿದಾರನನ್ನು ಟೀಕೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಐದು ವರ್ಷದ ನಮ್ಮ ಆಡಳಿತದಲ್ಲಿ ಸಾಕಷ್ಟು ಅಭಿವೃದ್ದಿಯನ್ನು ಕಂಡಿದೆ. ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ಉಕ್ಕಿನ ಉತ್ಪಾದನೆಯಲ್ಲಿ ಎರಡನೇ ಸ್ಥಾನಕ್ಕೇರಿದ್ದೇವೆ, ಅಲ್ಲದೇ ಮೆಕ್ ಇನ್ ಇಂಡಿಯಾ ಯೋಜನೆಯ ಮೂಲಕ ಸಾಕಷ್ಟು ಸಾಧನೆಗಳನ್ನು ಮಾಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿರಿ : ಬಜೆಟ್ ವೇಳೆ ಸಂಸದರಿಂದ ‘ಮೋದಿ ಮೋದಿ’ ಘೋಷಣೆ
ಜವಾಬ್ಧಾರಿಯುತ ವಿರೋಧ ಪಕ್ಷವಾಗಿ ಸರಕಾರವನ್ನು ಟೀಕಿಸುವ ಬದಲು ವಿದೇಶದಲ್ಲಿ ದೇಶದ ಮಾನ ತೆಗೆಯುವ ಕೆಲಸವನ್ನು ಮಾಡಿದ್ದೀರಿ. ದೇಶದ ಮೇಲೆ ಗೌರವ ಇರುವಂತಹ ಯಾವನೇ ವ್ಯಕ್ತಿಯೂ ಇಂತಹ ಕೆಲಸವನ್ನು ಮಾಡುವುದಿಲ್ಲ ಎಂದು ರಾಹುಲ್ ಗಾಂಧಿಯನ್ನು ತೀವ್ರವಾಗಿ ಟೀಕಿಸಿದರು.
ಕಾಂಗ್ರೆಸ್ ತನ್ನ 55 ವರ್ಷಗಳ ಅವಧಿಯಲ್ಲಿ ಮಾಡಲಾಗದೆ ಇರುವುದನ್ನು ನಮ್ಮ ಸರಕಾರ ಕೇವಲ 55 ತಿಂಗಳಲ್ಲಿ ಮಾಡಿ ತೋರಿಸಿದ್ದೇವೆ. ಬಡವರಿಗೆ ಬ್ಯಾಂಕ್ ಖಾತೆಗಳನ್ನು ಕೊಡಿಸಿದ್ದೇವೆ,ಬಡವರಿಗೆ ಹಿಂದೆಂದಿಗಿಂತಲೂ ಅಧಿಕ ಮನೆಗಳನ್ನು ನಿರ್ಮಾಣ ಮಾಡಿ ಅವರಿಗೆ ವಿತರಿಸಿದ್ದೇವೆ, ಗ್ರಾಮಪಂಚಾಯತ್ ಗಳಿಗೆ ಆಪ್ಟಿಕಲ್ ಪೈಬರ್ ನೆಟ್ವರ್ಕ್ ಕನೆಕ್ಷನ್ ನೀಡಿದ್ದೇವೆ, ಗ್ಯಾಸ್ ಕನೆಕ್ಷನ್ ನೀಡಿದ್ದೇವೆ, ಇಲ್ಲಿಯವರೆಗೂ ವಿದ್ಯುತ್ ಕಾಣದ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಿದ್ದೇವೆ, 10 ಕೋಟಿಗೂ ಅಧಿಕ ಶೌಚಾಲಯಗಳ ನಿರ್ಮಾಣ ಮಾಡಿದ್ದೇವೆ. ದೆಹಲಿಯ ಗದ್ದುಗೆ ನೋಡದ ನಾನು ಇಷ್ಟೆಲ್ಲಾ ಮಾಡಲು ಪ್ರಯತ್ನಿಸಿದ್ದೇನೆ. ಸಾಮಾನ್ಯನಾದ ನಾನು ರಾಜಮನೆತನಕ್ಕೆ ಸವಾಲಾಗಿರುವುದನ್ನು ಕಾಂಗ್ರೆಸಿನಿಂದ ಸಹಿಸಲು ಸಾಧ್ಯವಾಗುತ್ತಿಲ್ಲ.

ಇಷ್ಟೆಲ್ಲ ಜನಪರ ಕಾರ್ಯಗಳನ್ನು ಮಾಡಿದ್ದೆನಲ್ಲಾ ಹೀಗಾಗಿ ಸಹಿಸಿಕೊಳ್ಳಲು ಸಾಧ್ಯವಾಗದೆ ಎಲ್ಲರೂ ಒಟ್ಟಾಗಿ ಸೇರಿಕೊಂಡಿದ್ದಿರಾ. ನಿಮ್ಮ ಈ ಮಹಾಘಟಬಂಧನ್ ಇದು ಯಶಸ್ವಿಯಾಗಲು ಸಾಧ್ಯವಿಲ್ಲ. ಇದು ಮಹಾಘಟಬಂಧನ್ ಅಲ್ಲ ಕಲಬೆರಕೆ (ಮಹಾ ಮಿಲಾವಟ್) ಎಂದು ಹೇಳಿದರು. ನಿಮ್ಮ ಸ್ಥಿತಿ ಏನಾಗುತ್ತದೆ ಎಂದು ನೋಡುತ್ತಿರಿ ಎಂದು ಟೀಕಿಸಿದರು.
ಇದನ್ನೂ ಓದಿರಿ : ಮನ್ ಕೀ ಬಾತ್ ನಲ್ಲಿ ಸಿದ್ದಗಂಗಾ ಶ್ರಿಗಳನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ
Image copyright : google.com