ಇಮ್ರಾನ್ ಖಾನ್ ಗೆ ಕರೋನಾ: ಬೇಗ ಗುಣಮುಖರಾಗಿ ಎಂದ ಪ್ರಧಾನಿ ಮೋದಿ

pm-narendra-modi-wishes-speedy-recovery-to-pakistan-pm-imran-khan-from-covid19

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಚೀನಾದ ಕರೋನಾ ಲಸಿಕೆ ಪಡೆದ 48 ಗಂಟೆಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕೋವಿಡ್-19 ರಿಂದ ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ.

ಕೊರೋನಾಕ್ಕೆ ಇಮ್ರಾನ್ ಖಾನ್ ಶುಕ್ರವಾರವಷ್ಟೇ ಲಸಿಕೆಯನ್ನು ಪಡೆದಿದ್ದರು. ಇದಾದ ಕೇವಲ 48 ಗಂಟೆಗಳ ಬಳಿಕ ಅವರಿಗೆ ಸೋಂಕಿರುವುದು ಪತ್ತೆಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಪಾಕಿಸ್ತಾನದ ಆರೋಗ್ಯ ಸಚಿವ ಫೈಸಲ್ ಸುಲ್ತಾನ್, “ಇಮ್ರಾನ್ ಖಾನ್ ಮೊದಲ ಹಂತದ ಲಸಿಕೆಯನ್ನು ಪಡೆದಿದ್ದರು, ಆದರೆ 48 ಗಂಟೆಗಳ ಬಳಿಕ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಮ್ರಾನ್ ಖಾನ್ ಅವರಿಗೆ ಕೋವಿಡ್-19 ರಿಂದ ಬೇಗ ಗುಣಮುಖರಾಗಿ ಎಂದು ಹಾರೈಸಿ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here