pm-narendra-modi-launched-75-digital-banking-units

ನವದೆಹಲಿ: ದೇಶದಲ್ಲಿ ಹಣಕಾಸು ಸೇವೆಗಳನ್ನು ವ್ಯಾಪಕಗೊಳಿಸುವ ಮತ್ತೊಂದು ಕ್ರಮವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 75 ಡಿಜಿಟಲ್ ಬ್ಯಾಂಕಿಂಗ್ ಘಟಕ ಗಳನ್ನು (Digital Banking Units) ರಾಷ್ಟ್ರಕ್ಕೆ ಭಾನುವಾರ ಸಮರ್ಪಿಸಿದರು.

2022-23ರ ಕೇಂದ್ರ ಬಜೆಟ್‌ನಲ್ಲಿ, ಭಾರತ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥವಾಗಿ ದೇಶದ ಹಲವು ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕ ಗಳನ್ನು ಸ್ಥಾಪಿಸುವುದಾಗಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸುವ ಉದ್ದೇಶದಿಂದ ಈ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.

ಡಿಜಿಟಲ್ ಬ್ಯಾಂಕಿಂಗ್ ಮಳಿಗೆಗಳಲ್ಲಿ ಜನರಿಗೆ ಉಳಿತಾಯ ಖಾತೆ ತೆರೆಯುವುದು, ಖಾತೆಯ ಬ್ಯಾಲೆನ್ಸ್ ಚೆಕ್, ಪ್ರಿಂಟಿಂಗ್ ಪಾಸ್‌ಬುಕ್, ಹಣ ವರ್ಗಾವಣೆ, ಸ್ಥಿರ ಠೇವಣಿ ಹೂಡಿಕೆಗಳು, ಸಾಲದ ಅರ್ಜಿಗಳು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳಿಗೆ ಅರ್ಜಿ ಮತ್ತು ಬಿಲ್ ಮತ್ತು ತೆರಿಗೆ ಪಾವತಿಗಳಂತಹ ವಿವಿಧ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುತ್ತದೆ.

ಜನರಿಂದ ಹೆಚ್ಚು ಓದಲ್ಪಟ್ಟ ಲೇಖನ: ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇ-ಕೆವೈಸಿ ಮಾಡುವುದು ಹೇಗೆ ?

ಡಿಬಿಯುಗಳು ಗ್ರಾಹಕರಿಗೆ ವರ್ಷವಿಡೀ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವದಲ್ಲದೇ, ಡಿಜಿಟಲ್ ಹಣಕಾಸು ಸಾಕ್ಷರತೆ ಮತ್ತು ಸೈಬರ್ ಭದ್ರತೆ ಕುರಿತಂತೆ ಗ್ರಾಹಕರಿಗೆ ಜಾಗೃತಿಮೂಡಿಸುವಲ್ಲಿಯೂ ವಿಶೇಷ ಒತ್ತು ನೀಡುತ್ತವೆ. ಅಲ್ಲದೆ, ಡಿಬಿಯುಗಳು ನೇರವಾಗಿ ಅಥವಾ ವ್ಯವಹಾರ ಆಯೋಜಕರ ಮೂಲಕ ವ್ಯವಹಾರ ಮತ್ತು ಸೇವೆಗಳಿಂದ ಉದ್ಭವಿಸುವ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ಸಕಾಲಿಕ ಸಹಾಯವನ್ನು ಒದಗಿಸಲಿದೆ.

ಇದನ್ನೂ ಓದಿರಿ: PM Kisan : ನಾಳೆ ರೈತರ ಖಾತೆಗೆ ಸಂದಾಯವಾಗಲಿದೆ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್‌ ನಗದು

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here