pm-narendra-modi-inaugurates-defexpo-2022

ಗುಜರಾತ್ : ಗುಜರಾತ್‌ನ ರಾಜಧಾನಿ ಗಾಂಧಿನಗರದಲ್ಲಿ ಆಯೋಜಿಸಲಾಗಿರುವ DefExpo-2022 ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಭಾರತೀಯ ರಕ್ಷಣಾ ವಲಯಕ್ಕೆ ಬಲ ನೀಡುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಅತಿದೊಡ್ಡ ರಕ್ಷಣಾ ಪ್ರದರ್ಶನವನ್ನು ಗಾಂಧಿನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

DefExpo-2022 ರಲ್ಲಿ ವಿಶೇಷವಾಗಿ ರಕ್ಷಣಾ ಕ್ಷೇತ್ರದ ಆವಿಷ್ಕಾರಗಳನ್ನು ಪ್ರದರ್ಶನ ಮಾಡಲಾಗುವುದು. ಇದೇ ಸಮಯದಲ್ಲಿ ದೇಶಿಯ ನಿರ್ಮಿತ (HAL) ಏರ್‌ಕ್ರಾಫ್ಟ್ ಎಚ್‌ಟಿಟಿ-40 ನ್ನು ಅನಾವರಗೊಳಿಸಲಾಯಿತು. ಇಂದು ಆಯೋಜಿಸಿದ DefExpo-2022 ಕಾರ್ಯಕ್ರಮ ಉದ್ಘಾಟಿಸಿದ ನಂತರ ನೂತನವಾಗಿ ನಿರ್ಮಾಣವಾಗಲಿರುವ ದೀಸಾ ವಾಯುನೆಲೆಗೆ ಶಂಕು ಸ್ಥಾಪನೆ ನೆರವೇರಿಸಿದರು.

ಇದನ್ನೂ ಓದಿ: ಇಬ್ಬರು ವಲಸೆ ಕಾರ್ಮಿಕರನ್ನು ಕೊಂಡಿದ್ದ ಉಗ್ರ ಇಮ್ರಾನ್ ಬಶೀರ್ ಫಿನಿಶ್ 

ದೀಸಾ ವಾಯುನೆಲೆಗೆ ಶಂಕು ಸ್ಥಾಪನೆ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿ ವಾಯನೆಲೆ ಹೊಂದಿರಬೇಕಾದ್ದು ನಿರ್ಣಾಯಕ ಅಂಶವಾಗಿದೆ. ಈ ಹೊಸ ವಾಯುನೆಲೆಯು ದೇಶದ ಸುರಕ್ಷತೆಯ ವಿಚಾರದಲ್ಲಿ ಪರಿಣಾಮಕಾರಿ ಕೇಂದ್ರವಾಗಿ ರೂಪುಗೊಳ್ಳಲಿದೆ. ಈ ವಾಯುನೆಲೆಯೂ ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 130 ಕಿ.ಮೀ. ದೂರದಲ್ಲಿ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಪಾಶ್ಚಿಮಾತ್ಯ ಶಕ್ತಿಗಳಿಂದ ಬರುವ ಯಾವುದೇ ಬೆದರಿಕೆಗಳಿಗೆ ತಕ್ಕ ಉತ್ತರ ನೀಡಲು ಸಾಧ್ಯವಾಗಲಿದೆ” ಎಂದು ಹೇಳಿದರು.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here