pm-modis-visit-to-troops-along-loc-on-diwali-left-them-ecstatic-and-proud

ಜಮ್ಮು: ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ಇಂಡೋ-ಪಾಕ್ ಗಡಿಯಲ್ಲಿ ದಿಪಾವಳಿಯನ್ನು ಆಚರಿಸಿದರು. ಅವರು ಮೊಟ್ಟ ಮೊದಲ ಬಾರಿಗೆ ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಕಾವಲು ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ.

ಪಾಕಿಸ್ತಾನದ ಕದನ ವಿರಾಮಕ್ಕೆ ಗುರಿಯಾಗಿ ಸಾವಿರಾರು ಸೈನಿಕರು ಪ್ರಾಣಕಳೆದುಕೊಳ್ಳುವ ರಾಜೌರಿ ಮತ್ತು ಪೂಂಚ್ ಗಾಡಿಯಲ್ಲಿ ಇಂದು ಮೋದಿ ಸೈನಿಕರ ಜೊತೆಯಲ್ಲಿ ದೀಪಾವಳಿ ಆಚರಿಸಿದ್ದು ವಿಶೇಷವಾಗಿತ್ತು. ಸೈನಿಕರ ಜೊತೆಯಲ್ಲಿ ಹಬ್ಬ ಆಚರಿಸಿ ಸಿಹಿಯನ್ನು ಹಂಚಿ ಸಂತಸ ಪಟ್ಟರು. ಜಮ್ಮು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಪ್ರಧಾನಿಯ ಮೊದಲ ಬೇಟಿ ಇದಾಗಿತ್ತು.

ಇದನ್ನು ಓದಿರಿ: ಕಾಶ್ಮೀರದಲ್ಲಿ 370ನೇ ವಿಧಿಯ ರದ್ಧತಿಯ ಬಳಿಕ ಹಿಂಸಾಚಾರ ಸುದ್ದಿ: ಯುರೋಪಿಯನ್ ನಿಯೋಗ ಬೇಟಿ

pm-modis-visit-to-troops-along-loc-on-diwali-left-them-ecstatic-and-proud

ಮೊದಿಯವರೊಂದಿಗಿನ ದೀಪಾವಳಿಯ ಆಚರಣೆಯ ಕುರಿತು ಮಾತನಾಡಿದ ಸೈನಿಕರು, ಪ್ರಧಾನಿಯವರು ನಮ್ಮೊಂದಿಗೆ ದೀಪಾವಳಿ ಆಚರಿಸುವ ಮೂಲಕ ನಮ್ಮ ದಿಪಾವಳಿಯನ್ನು ಸ್ಮರನೀಯವಾಗಿಸಿದ್ದಾರೆ ಎಂದು ಹೇಳಿದರು. ಪ್ರತಿದಿನ ಗಡಿಯನ್ನು ಕಾಯುವ ನಮ್ಮೊಂದಿಗೆ ಹೀಗೆ ಹಬ್ಬವನ್ನು ಆಚರಿಸುವುದರಿಂದ ನಮ್ಮ ಮನೋಸ್ಥೈರ್ಯ ಹೆಚ್ಚಿಸಿದಂತಾಗುತ್ತದೆ. ಆ ಮೂಲಕ ಸರಕಾರ ನಮ್ಮ ಹಿಂದೆ ಇದೆ ಮತ್ತು ದೇಶಕ್ಕೆ ನಮ್ಮ ಸೇವೆಯನ್ನು ಸಲ್ಲಿಸಲು ನಮಗೆ ಬೆಂಬಲ ನೀಡುತ್ತದೆ ಎನ್ನುವ ನಂಬಿಕೆ ಬರುತ್ತದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here