pm-modis-diwali-2020-celebrations-with-bsf-soldiers-in-jaisalmer-rajasthan

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ರಾಜಸ್ತಾನದ ಜೈಸಲ್ಮೇರ್ ನ ಲಾಂಗಾವಲಾದಲ್ಲಿ ಸೈನಿಕರೊಂದಿಗೆ ಈ ಬಾರಿಯ ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆ. ಸತತವಾಗಿ ಏಳು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ದೇಶದ ಪ್ರಧಾನಿಯವರು ದೇಶ ಕಾಯುವ ಸೈನಿಕರೊಂದಿಗೆ ಗಡಿಯಲ್ಲಿ ದೀಪಾವಳಿ ಆಚರಿಸುವುದು ವಿಶೇಷವಾಗಿದೆ.

ಈ ವಿಶೇಷ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರ ಜೊತೆಯಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಎಂ.ಎಂ.ನಾರವಾನೆ ಅವರು ಸಹ ಜೊತೆಯಾಗಲಿದ್ದಾರೆ. ಈ ವಿಶೇಷ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿಯವರು 2014 ರಲ್ಲಿ ತಾವು ಅಧಿಕಾರಕ್ಕೆ ಬಂದಾಗಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ.

ಇದನ್ನೂ ಓದಿರಿ : ಭಾರತ ತನ್ನ ಶಕ್ತಿಯನ್ನು ತೋರಿಸಿದ್ದು, ನಮ್ಮನ್ನು ಪರೀಕ್ಷಿಸಿದರೆ ಸಿಗುವ ಉತ್ತರ ತೀವ್ರವಾಗಿರುತ್ತದೆ – ನರೇಂದ್ರ ಮೋದಿ

ದೀಪಾವಳಿಯ ಶುಭಾಷಯ ಕೋರಿ ಟ್ವಿಟ್ ಮಾಡಿರುವ ನರೇಂದ್ರ ಮೋದಿಯವರು, “ದೇಶದ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು, ಈ ದೀಪಾವಳಿಯು ಪ್ರತಿಯೊಬ್ಬರ ಬಾಳಲ್ಲಿ ಬೆಳಕು ಮತ್ತು ಸಂತೋಷವನ್ನು ಹೆಚ್ಚಿಸಲಿ” ಎಂದು ಹೇಳಿದ್ದಾರೆ.

“ನಿರ್ಭಯವಾಗಿ ದೇಶವನ್ನು ಕಾಯುತ್ತಿರುವ ಸೈನಿಕರಿಗಾಗಿ ದೀಪವನ್ನು ಬೆಳಗೋಣ. ಅವರ ನಿಸ್ವಾರ್ಥ ಸೇವೆಗೆ ನಮ್ಮ ಕೃತಜ್ಞತೆಯನ್ನು ತಿಳಿಸೋಣ. ನಮ್ಮನ್ನು ಸದಾ ರಕ್ಷಿಸುವ ಸೈನಿಕರ ಪರಿವಾರಕ್ಕೂ ಕೃತಜ್ಞತೆಯನ್ನು ಸಲ್ಲಿಸೋಣ” ಎಂದು ಹೇಳಿದ್ದಾರೆ.

ದೇಶ ಕಾಯುವ ಸೈನಿಕರಿಗಾಗಿ ಈ ದೀಪಾವಳಿಯಲ್ಲಿ ದೀಪಗಳನ್ನು ಬೆಳಗೋಣ ಎಂದು ಹೇಳಿರುವ ಮೋದಿ, ತಾವು ಈ ಮೊದಲು ಮನ್ ಕಿ ಬಾತ್ ನಲ್ಲಿ ಕರೆನೀಡಿರುವ ವಿಡಿಯೋವನ್ನು ಸಹ ಪೋಸ್ಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here