pm-modi-wishes-for-a-safe-healthy-and-prosperous-planet-on-navratri

ನವದೆಹಲಿ: ಇಂದಿನಿಂದ ದೇಶದಾದ್ಯಂತ ನವರಾತ್ರಿಯ ಉತ್ಸವವು ಪ್ರಾರಂಭವಾಗಲಿದ್ದು, ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭಾಶಯವನ್ನು ಕೋರಿದ್ದಾರೆ.

ಇಂದಿನಿಂದ ಆರಂಭವಾಗಿರುವ ನವರಾತ್ರಿಯ ಆಚರಣೆಯಲ್ಲಿ ವ್ರತವನ್ನು ಆಚರಿಸಿ, ದುರ್ಗಾ ಮಾತೆಯ ವಿವಿಧ ಅವತಾರಗಳನ್ನು ಶ್ರದ್ದೆ ಮತ್ತು ಭಕ್ತಿಯಿಂದ ದೇಶದಾದ್ಯಂತ ಪೂಜಿಸಲಾಗುತ್ತದೆ. ಈ ಬಾರಿ ಕೊರೋನಾ ವೈರಸ್ ಬಂದು ನಮ್ಮ ಸಂಭ್ರಮ ಸಡಗರಕ್ಕೆ ಸಣ್ಣ ಪ್ರಮಾಣದ ನಿಯಂತ್ರಣವನ್ನು ಹೇರಿದ್ದು, ಮನೆ ಮನೆಗಳಲ್ಲಿ ಶೃದ್ಧೆ, ಭಕ್ತಿಯಿಂದ ಆಚರಿಸಲು ಯಾವುದೇ ತೊಡಕಿಲ್ಲ. ಇಂತಹ ಶುಭ ಸಂದರ್ಭಕ್ಕೆ ದೇಶದ ಪ್ರಧಾನಿ ಹುದ್ದೆಯಲ್ಲಿ ಕುಳಿತಿರುವ ನರೇಂದ್ರ ಮೋದಿಯವರು ದೇಶದ ಜನತೆಗೆ ನವರಾತ್ರಿಯ ಶುಭಾಶಯವನ್ನು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

ನವರಾತ್ರಿಯ ಪ್ರಥಮ ದಿನದಂದು ನಾವು ಶೈಲಪುತ್ರಿಯನ್ನು ಭಕ್ತಿಯಿಂದ ಪೂಜಿಸುತ್ತೇವೆ. ಶೈಲಪುತ್ರಿಯ ಆಶೀರ್ವಾದದಿಂದ ನಮ್ಮ ಮನೆ ಸುರಕ್ಷಿತವಾಗಿ, ಆರೋಗ್ಯವಾಗಿ ಮತ್ತು ಸಮೃದ್ಧವಾಗಿರಲಿ ಎಂದು ಬೇಡಿಕೊಂಡಿದ್ದಾರೆ. ಅದೇ ರೀತಿ ತಾಯಿಯ ಆಶೀರ್ವಾದದಿಂದ ಬಡ ಮತ್ತು ದೀನ ದಲಿತರ ಜೀವನ ಸಮೃದ್ಧವಾಗಲಿ. ಜೈ ಮಾತಾ ಕಿ.. ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here