pm-modi-to-visit-kargil-continues-his-tradition-to-celebrate-diwali-with-soldiers

ಕಾರ್ಗಿಲ್: 2014 ರಲ್ಲಿ ಪ್ರಧಾನಿಯಾದಾಗಿನಿಂದಲೂ ಗಡಿಭದ್ರತಾ ಪಡೆಗಳ ಜೊತೆಯಲ್ಲಿ ದೀಪಾವಳಿ ಆಚರಿಸಿಕೊಳ್ಳುತ್ತಿರುವ ನರೇಂದ್ರ ಮೋದಿಯವರು ಈ ಬಾರಿ ಕಾರ್ಗಿಲ್ ಗೆ ಬಂದಿಳಿದಿದ್ದಾರೆ.

2014 ರಲ್ಲಿ ಪ್ರಧಾನಿಯಾದಾಗಿನಿಂದಲೂ ಉತ್ತರಾಖಂಡ, ಹಿಮಾಚಲ ಪ್ರದೇಶ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿಕೊಳ್ಳುತ್ತ ಬಂದಿದ್ದಾರೆ. ಕೆಲ ಸಮಯ ಸೈನಿಕರೊಂದಿಗೆ ಬೆರೆತು, ಸಿಹಿ ಹಂಚಿ ಸೈನಿಕರೊಂದಿಗೆ ಸಂಭ್ರಮ ಪಡುತ್ತಾರೆ.

ಇದನ್ನೂ ಓದಿರಿ: Ayodhya Deepotsav: ದೀಪೋತ್ಸವದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ಬಂದಿಳಿದ ಮೋದಿ

ಅಧಿಕಾರಕ್ಕೆ ಬಂದ ನಂತರ ಹೊಸ ತೀರ್ಮಾನ ತೆಗೆದುಕೊಂಡು ಮೊದಲ ಬಾರಿಗೆ ಸಿಯಾಚಿನ್ ನಲ್ಲಿ ದೀಪಾವಳಿಯನ್ನು ಆಚರಿಸಿಕೊಂಡರು. ಇನ್ನು 2015 ರಲ್ಲಿ ಪಂಜಾಬ್ ಪ್ರಾಂತ್ಯಕ್ಕೆ ಭೇಟಿನೀಡಿ ಅಲ್ಲಿನ ಸೈನಿಕರೊಂದಿಗೆ ಆಚರಣೆಯನ್ನು ಮಾಡಿದ್ದರು. 2016 ರಲ್ಲಿ ಚೀನಾ ಗಡಿ ಭಾಗಕ್ಕೆ ಭೇಟಿ ನೀಡಿ ಅತಿಕ್ರಮ ಪ್ರವೇಶದ ಬಗ್ಗೆ ಗುಡುಗಿದ್ದಲ್ಲದೇ ಸೈನಿಕರಿಗೆ ಶುಭಾಶಯ ಹೇಳಿ ಸಿಹಿ ಹಂಚಿದ್ದರು. 2017 ರಲ್ಲಿ ಕಾಶ್ಮೀರಕ್ಕೆ ತೆರಳಿ ಅಲ್ಲಿನ ಗಡಿಭದ್ರತಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಣೆ ಮಾಡಿದ್ದರು.

ಇದನ್ನೂ ಓದಿರಿ: ನಿಮ್ಮ ಪ್ರೀತಿ ಪಾತ್ರರಿಗೆ ದೀಪಾವಳಿ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು

2018 ರಲ್ಲಿ ಉತ್ತರಾಖಂಡದ ಹರ್ಷಿಲ್ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರೊಂದಿಗೆ ದೀಪಾವಳಿ ಆಚರಣೆಯನ್ನು ಮಾಡಿದ್ದ ಪ್ರಧಾನಿಗಳು 2019 ರಲ್ಲಿ ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಎಲ್ ಓ ಸಿ ಸಮೀಪದಲ್ಲಿ ದೀಪಾವಳಿ ಆಚರಣೆ ಮಾಡಿದ್ದರು. ಕೋವಿಡ್ ಸಮಸ್ಯೆಯ ನಡುವೆಯೂ 2020 ರಲ್ಲಿ ಜೈಸಲ್ಮೇರ್‌ನ ಲೋಂಗೆವಾಲಾದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಣೆ ಮಾಡಿದ್ದರು. ಕಳೆದ ವರ್ಷ ಜಮ್ಮು-ಕಾಶ್ಮೀರದ ನೌಶೇರಾ ಪೋಸ್ಟ್ ಗೆ ಭೇಟಿ ನೀಡಿ ಹಿಮಾವೃತ ಪರ್ವತ ಅಥವಾ ಮರುಭೂಮಿಯಲ್ಲಿ ಇರುತ್ತೀರಿ, ನಿಮ್ಮ ಬಳಿಗೆ ಬಂದು ಹಬ್ಬ ಆಚರಿಸಿದಾಗಲೇ ನನಗೆ ಪರಿಪೂರ್ಣವಾಗುತ್ತದೆ ಎಂದು ಹೇಳಿಕೊಂಡಿದ್ದರು.

ತಮ್ಮ ವಯಕ್ತಿಕ ಜೀವನವನ್ನು ಬಿಟ್ಟು ದೇಶದ ರಕ್ಷಣೆಗಾಗಿ ಹಗಲಿರುಳು ದುಡಿಯುತ್ತಿರುವ ಸೈನಿಕರೊಂದಿಗೆ ಪ್ರಧಾನಿ ಕೆಲ ಕ್ಷಣ ಕಳೆಯುವುದು ಸೈನಿಕರಿಗೆ ಸಂತಸದ ವಿಷಯವಾಗಿದೆ. ಈ ಮೂಲಕ ಆತನ ಪರಿಶ್ರಮಕ್ಕೆ ಪ್ರತಿಫಲ ನೀಡಲು ಸಾಧ್ಯವಾಗದಿದ್ದರೂ, ಇಡೀ ದೇಶ ತನ್ನೊಂದಿಗಿದೆ, ಪ್ರಧಾನಿಯೊಬ್ಬರು ತಮ್ಮೊಂದಿಗೆ ಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಾರೆ ಎಂಬ ಆತ್ಮವಿಶ್ವಾಸ ಸೈನಿಕರಿಗೆ ನೀಡುತ್ತದೆ. ದೇಶದ ಪ್ರಧಾನಿಯೊಬ್ಬರ ಈ ನಡೆಯು ಸೈನಿಕರಿಗೆ ಕಿಂಚಿತ್ ನೆಮ್ಮದಿ ನೀಡಿದರೆ ಅದೇ ಸಂತೋಷ ಅಲ್ಲವೇ..

ಇದನ್ನು ಓದಿರಿ: ದೀಪಾವಳಿಯಂದು ಎಣ್ಣೆ ಸ್ನಾನ ಯಾಕೆ ಮಾಡುತ್ತಾರೆ? ಮಹತ್ವ ಏನು?

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here