sardar-vallabhbhai-patel

ದೇಶದ ಮೊದಲ ಉಪ ಪ್ರಧಾನಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಕೆವಾಡಿಯಾದಲ್ಲಿನ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿದರು. ಇಂದು ಸರ್ದಾರ್ ಪಟೇಲರ 144 ನೇ ಜಯಂತಿಯ ಅಂಗವಾಗಿ ಗುಜರಾತಿನ ಕೆವಾಡಿಯಾದಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ದಾರ್ ಪ್ರತಿಮೆಗೆ ಹೂವನ್ನು ಅರ್ಪಿಸಿ ನಮನ ಸಲ್ಲಿಸಿದರು. ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನತೆಗೆ ಏಕತಾ ಪ್ರಮಾಣ ಬೋಧಿಸಿ, ನಂತರ ರಾಷ್ಟ್ರೀಯ ಏಕತಾ ಪರೇಡ್ ವಿಕ್ಷಿಸಿದರು.

ಈ ಕಾರ್ಯಕ್ರಮದಲ್ಲಿ ಅನೇಕ ಸಾಹಸ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಏನ್.ಡಿ.ಆರ್.ಎಫ್. ತಂಡದಿಂದ ಪ್ರಕೃತಿ ವಿಕೋಪದ ಸಮಯದಲ್ಲಿನ ರಕ್ಷಣಾ ಕಾರ್ಯಾಚರಣೆಯ ಪ್ರದರ್ಶನವನ್ನು ಮಾಡಲಾಯಿತು. ನಂತರ ಏನ್.ಎಸ್.ಜಿ. ಕಮಾಂಡೋಗಳಿಂದ ಬಯೋತ್ಪಾದಕ ದಾಳಿಗಳ ಯಶಸ್ವಿ ಕಾರ್ಯಾಚರಣೆಯ ಪ್ರದರ್ಶನ ನೀಡಿದರು.

sardar-vallabhbhai-patel

ಇದನ್ನೂ ಓದಿರಿ: ಇಂಡೋ-ಪಾಕ್ ಗಡಿಯಲ್ಲಿ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ

ನಂತರ ಮಾತನಾಡಿದ ನರೇಂದ್ರ ಮೋದಿ, “ನಾವು ಸರ್ದಾರ್ ಪಟೇಲ್ ಅವರ ಮಾತುಗಳನ್ನು ಕೇಳಿದಾಗ ದೇಶದ ಅಖಂಡತೆ ಮತ್ತು ಏಕತೆಗಾಗಿ ಅವರ ಅಚಲ ನಿರ್ಧಾರ ಒಂದೊಂದು ಶಬ್ದ, ಒಂದೊಂದು ಮಾತುಗಳಲ್ಲಿ ಕಂಡುಬರುತ್ತದೆ. ಅವರ ಮಾತಿನಲ್ಲಿರುವ ಶಕ್ತಿ ಮತ್ತು ವಿಚಾರದಾರೆಯಲ್ಲಿರುವ ಪ್ರೇರಣೆಯು ಈ ದೇಶದ ಪ್ರತಿಯೊಬ್ಬನಿಗೂ ಅನುಭವಕ್ಕೆ ಬರುತ್ತದೆ. ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹಲವಾರು ವರ್ಷಗಳಿಂದ ಕಂಡುಕೊಂಡು ಬಂದಿದೆ. ಇದೇ ನಮ್ಮ ಗೌರವ, ಗುರುತು ಮತ್ತು ಹೆಗ್ಗಳಿಕೆಯೂ ಆಗಿದೆ. ಇಲ್ಲಿ ದಕ್ಷಿಣದಲ್ಲಿ ಜನಿಸಿದ ಆದಿ ಶಂಕರಾಚಾರ್ಯರು ಉತ್ತರದ ಹಿಮಾಲಯಗಳಿಗೆ ತೆರಳಿ ಮಠಗಳನ್ನು ಸ್ಥಾಪಿಸಿದ್ದಾರೆ. ಇಲ್ಲಿ ಬಂಗಾಳದಲ್ಲಿ ಜನಿಸಿದ ಸ್ವಾಮಿ ವಿವೆಕಾನಂದ ಅವರಿಗೆ ದಕ್ಷಿಣ ಕನ್ಯಾಕುಮಾರಿಯಲ್ಲಿ ಜ್ಞಾನ ಲಭಿಸುತ್ತದೆ. ಇಲ್ಲಿ ಪಾಟ್ನಾದಲ್ಲಿ ಜನಿಸಿದ ಗುರುಗೊವಿಂದ್ ಸಿಂಗ್ ಪಂಜಾಬಿಗೆ ಹೋಗಿ ದೇಶದ ರಕ್ಷಣೆಗಾಗಿ ಖಾಲ್ಸಾ ಪಂಥವನ್ನು ಸ್ಥಾಪನೆ ಮಾಡ್ತಾರೆ. ರಾಮೇಶ್ವರದಲ್ಲಿ ಜನಿಸಿದ ಎ.ಪಿ.ಜೆ. ಅಬ್ದುಲ್ ಖಲಾಂ ದೆಹಲಿಯಲ್ಲಿ ಸಾಧನೆ ಮಾಡ್ತಾರೆ. ಗುಜರಾತಿನಲ್ಲಿ ಜನಿಸಿದ ಗಾಂಧಿ ಬಿಹಾರದ ಚಂಪಾದಲ್ಲಿ ದೇಶವನ್ನು ಮುಕ್ತಗೊಳಿಸುವ ನಿರ್ಧಾರವನ್ನು ಕೈಗೊಳ್ಳತಾರೆ. ಇದರಿಂದಾಗಿ ನಾನು ನಂಬುತ್ತೇನೆ ಈ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೀಗೆಯೇ ಕಾಯ್ದುಕೊಂಡು ಹೋಗುವುದು ಅವಶ್ಯವಿದೆ” ಎಂದು ಹೇಳಿದರು.

370 ನೇ ವಿಧಿಯನ್ನು ಕೊನೆಗಾಣಿಸುವ ಮೂಲಕ ಸರ್ದಾರ್ ಪಟೇಲರ ಅಖಂಡ ಭಾರತದ ಕನಸು ನನಸಾಗಿದೆ. ಈ ಸಾಧನೆಗೆ ಸಹಕರಿಸಿದ ಎಲ್ಲ ರಾಜ್ಯಸಭಾ ಸದಸ್ಯರಿಗೂ ಈ ಸಮಯದಲ್ಲಿ ಧ್ಯನ್ಯವಾದ ಅರ್ಪಿಸಿದರು. ಅಲ್ಲದೇ ಇಂದಿನಿಂದ ಲದಾಕ್, ಜಮ್ಮು ಮತ್ತು ಕಾಶ್ಮೀರ ರಾಜ್ಯವಾಗಿ ಮುನ್ನಡೆಯುತ್ತದೆ ಎಂದು ತಿಳಿಸಿದರು.

ಗುಜರಾತಿನ ಕೆವಾಡಿಯಾದಲ್ಲಿ ನಡೆದ ಏಕತಾ ದಿವಸ್ ಕಾರ್ಯಕ್ರಮದ ಸಂಪೂರ್ಣ ವಿಡಿಯೋ ಚಿತ್ರಣ ನಿಮಗಾಗಿ ….

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here