pm-modi-to-inaugurate-strategic-atal-tunnel-at-rohtang-in-himachal-pradesh-on-saturday

ಶಿಮ್ಲಾ: ವಿಶ್ವದ ಅತೀ ಉದ್ದದ ಅಟಲ್ ಸುರಂಗ ಮಾರ್ಗವನ್ನು ಅಕ್ಟೊಬರ್ 3 ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಸಮುದ್ರ ಮಟ್ಟದಿಂದ 10 ಸಾವಿರ ಅಡಿಗಳಷ್ಟು ಎತ್ತರದಲ್ಲಿ ಸುರಂಗ ಮಾರ್ಗವನ್ನು ನಿರ್ಮಿಸಲು ಜೂನ್ 2000 ನೇ ಇಸವಿಯಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಶಂಕುಸ್ಥಾಪನೆ ಮಾಡಿದ್ದರು.

ಇದು ವಿಶ್ವದಲ್ಲಿಯೇ ಅತೀ ಉದ್ದದ ಸುರಂಗ ಮಾರ್ಗ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಮನಾಲಿಯಿಂದ ಲೇಹ್ ಗೆ ಸಂಪರ್ಕಿಸಲು ನಿರ್ಮಿಸಲಾಗಿದೆ. ಈ ಹೆದ್ದಾರಿಯು 9.2 ಕಿ ಮೀ ಉದ್ದವಾಗಿದ್ದು, ಮನಾಲಿಯ ದಕ್ಷಿಣ ತುದಿಯಲ್ಲಿ ಅಟಲ್ ಸುರಂಗದ ಉದ್ಘಾಟನಾ ಸಮಾರಂಭದಲ್ಲಿ ಆ. 3 ರಂದು ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ.

ಪ್ರತಿ ವರ್ಷವೂ ಮನಾಲಿಯಲ್ಲಿ ಅತಿಯಾಗಿ ಹಿಮಪಾತವಾಗುವುದರಿಂದ ಕೇವಲ ಆರು ತಿಂಗಳುಗಳ ಕಾಲ ಮಾತ್ರ ಸಂಚಾರಕ್ಕೆ ಸಾಧ್ಯವಾಗುತ್ತದೆ. ಈ ಸುರಂಗದಿಂದಾಗಿ ಲೇಹ್ ಗೆ ಸಮರ್ಕಿಸಲು ಯಾವುದೇ ಅಡೆತಡೆಗಳು ಇನ್ನುಮುಂದೆ ಇರುವುದಿಲ್ಲ. ಸುರಂಗದಲ್ಲಿ ಸಿಸಿಟಿವಿ ಕೆಮರಾಗಲು, ಅಗ್ನಿ ಅವಘಡ ತಡೆ ರಕ್ಷಕಗಳು ಮತ್ತು ಪ್ರತಿ 500 ಮೀಟರ್ ಗಳಿಗೆ ತುರ್ತು ನಿರ್ಗಮನ ಸುರಂಗ ವ್ಯವಸ್ಥೆಗಳನ್ನು ಹೊಂದಿದೆ. ಇದಲ್ಲದೆ ನಾಲ್ಕು ಗಂಟೆಗಳ ಪ್ರಯಾಣದ ಸಮಯವನ್ನು ಸಹ ಉಳಿತಾಯ ಮಾಡಲಿದೆ.

ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿರುವ ‘ಅಟಲ್ ಸುರಂಗ’ ಮಾರ್ಗದ ಬಗ್ಗೆ ನಿಮಗೆಷ್ಟು ಗೊತ್ತು ?

LEAVE A REPLY

Please enter your comment!
Please enter your name here