pm-modi-to-inaugurate-first-seaplane-service-from-sabarmati-riverfront-to-statue-of-unity

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 31 ರಂದು ಗುಜರಾತ್ ನಲ್ಲಿ ದೇಶದ ಮೊದಲ ಸಮುದ್ರ ವಿಮಾನ ಸೇವೆಗೆ ಚಾಲನೆ ನೀಡಲಿದ್ದಾರೆ.

ಸರ್ದಾರ್ ವಲ್ಲಭ ಬಾಯಿ ಪಟೇಲರ ಜನ್ಮದಿಂದಂದು ಸಮುದ್ರ ವಿಮಾನ ಸೇವೆ ಪ್ರಾರಂಭಿಸುವುದಾಗಿ ಗುಜರಾತ್ ಸರಕಾರ ಘೋಷಣೆ ಮಾಡಿತ್ತು. ಅಹಮದಾಬಾದ್ ನ ಸಬರಮತಿ ರಿವರ್ ಪ್ರಂಟ್ ನಿಂದ ಕೆವಾಡಿಯಾ ಏಕತಾ ಪ್ರತಿಮೆಗೆ ಹತ್ತಿರವಾಗುವಂತೆ ಈ ಸೀ- ಪ್ಲೇನನ್ನು ಆರಂಭಿಸಲಾಗುತ್ತಿದೆ. ದೇಶದಲ್ಲಿ ಸಮುದ್ರ ವಿಮಾನ ಸೇವೆಯು ಇದೆ ಮೊದಲಾಗಿದ್ದು, “ದೇಶದ ಮೊಟ್ಟ ಮೊದಲ ಸಮುದ್ರ ವಿಮಾನ ಸೇವೆ” ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಸ್ಪೇಸ್ ಜೆಟ್ ಕಂಪನಿಯ ವಿಮಾನಗಳು ಇಲ್ಲಿ ಪ್ರಾರಂಭವಾಗಲಿದ್ದು, ಇದರಲ್ಲಿ ಒಟ್ಟು 19 ಆಸನಗಳ ವ್ಯವಸ್ಥೆ ಇರಲಿದೆ. ಈ ಸೇವೆಯಿಂದಾಗಿ ಕೆವಾಡಿಯದ ಏಕತಾ ಪ್ರತಿಮೇಯ ವೀಕ್ಷಣೆಗೆ ತೆರಳುವ ಪ್ರವಾಸಿಗರಿಗೆ ಸಹಾಯವಾಗಲಿದೆ.

ಇದನ್ನೂ ಓದಿರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು

 

LEAVE A REPLY

Please enter your comment!
Please enter your name here