ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಂಜೆ 5 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕರೋನ ಎರಡನೆ ಅಲೆಯ ಅಬ್ಬರ ಸ್ವಲ್ಪ ತಗ್ಗಿದ್ದು, ವಿವಿಧ ರಾಜ್ಯಗಳು ಸಡಿಲಿಕೆಯ ಕ್ರಮಗಳನ್ನು ಅನುಸರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಾಗಿ ಮಾತನಾಡಬಹದು ಎಂಬ ನಿರೀಕ್ಷೆಗಳಿವೆ.
Prime Minister Shri @narendramodi will address the nation at 5 PM today, 7th June.
— PMO India (@PMOIndia) June 7, 2021
ಪ್ರಧಾನಿಗಳು ಅನ್ ಲಾಕ್ ಸಮಯದಲ್ಲಿ ಜನಸಾಮಾನ್ಯರು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಮತ್ತು ಲಸಿಕೆ ವಿತರಣೆಯ ಕುರಿತಾಗಿಯೂ ಮಾತನಾಡಬಹದು. ಕಳೆದ ಬಾರಿಯಂತೆಯೇ ಕೇಂದ್ರ ಸರಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆ ಆಗಬಹುದು ಎಂಬ ನಿರೀಕ್ಷೆ ಸಹ ಇದೆ.
ದೇಶವು ಆರ್ಥಿಕವಾಗಿ ಬಳಲಿಕೆಯನ್ನು ಕಾಣುತ್ತಿರುವ ಈ ಸಮಯದಲ್ಲಿ ದೇಶದ ಪ್ರಧಾನಿ ವಿಶೇಷ ಪ್ಯಾಕೇಜ್ ಏನಾದರೂ ಘೋಷಣೆ ಮಾಡಲಿದ್ದಾರೆ ? ಅಥವಾ ಬೇರೆಯಾವುದಾರೂ ಘೋಷಣೆಗಳು ಬರಲಿವೆಯೇ ? ಎಂಬ ಕುತೂಹಲ ಜನರಲ್ಲಿ ಮೂಡಿದೆ.
ಇದನ್ನು ಓದಿರಿ: ಹೈಕಮಾಂಡ್ ಬಯಸಿದರೆ ತಕ್ಷಣ ರಾಜೀನಾಮೆ ನೀಡಲು ನಾನು ಸಿದ್ಧ: ಮುಖ್ಯಮಂತ್ರಿ ಯಡಿಯೂರಪ್ಪ