ನವದೆಹಲಿ: ನೂತನ ಶಿಕ್ಷಣ ನೀತಿಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದ್ದು, ಈ ಸಂಬಂಧ ದೇಶವನ್ನುದೇಶಿಸಿಪ್ರಧಾನಿ ನರೇಂದ್ರ ಮೋದಿಯವರು ಇಂದು ಮಾತನಾಡಲಿದ್ದಾರೆ.
ಕೇಂದ್ರ ಸರಕಾರ ಸುಮಾರು 34 ವರ್ಷ ಹಳೆಯದಾದ ಶಿಕ್ಷಣ ನೀತಿಯನ್ನು ಬದಲಾಯಿಸಲು ಹೆಜ್ಜೆ ಇಟ್ಟಿದೆ. ಈ ಸಂಬಂಧ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಹ ದೊರೆತಿದೆ. ಈ ಹೊಸನೀತಿಯಯಲ್ಲಿ ಆಳವಾದ ಜ್ಞಾನವನ್ನು ಹೆಚ್ಚಿಸುವ ಜೊತೆಗೆ ಆಲೋಚನಾ ಶಕ್ತಿ, ಕೌಶಲ್ಯ, ಚೈತನ್ಯ, ಸ್ಪೂರ್ತಿ ಮತ್ತು ಜವಾಬ್ದಾರಿ ಬಗ್ಗೆ ಅರಿವನ್ನು ಹೆಚ್ಚಿಸುವ ಉದ್ದೇಶ ಅಡಕವಾಗಿದೆ.
ಇಂದು 4.30 ನಿಮಿಷಕ್ಕೆ ಶಿಕ್ಷಣ ನೀತಿ ಬದಲಾವಣೆ ಮತ್ತು ಅನ್ ಲಾಕ್ 3.0 ಪ್ರಾರಂಭವಾಗುವ ವಿಷಯಗಳ ಕುರಿತಾಗಿ ಪ್ರಧಾನಿಗಳು ಮಾತನಾಡಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿರಿ: ಶಿಕ್ಷಣ ನೀತಿ ಬದಲಾವಣೆ: ಇಂದು ಸಂಜೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ