pm-modi-speech-today-live-pm-narendra-modi-address-to-nation

ನವದೆಹಲಿ: ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಮೂರನೆ ಬಾರಿ ಲಾಕ್ ಡೌನ್ ಘೋಷಿಸಿದ್ದ ನರೇಂದ್ರ ಮೋದಿಯವರು, ಈ ಅವಧಿ ಮುಗಿಯುವ ಮುನ್ನ ಇಂದು ಮಾತನಾಡಿ ಆತ್ಮ ನಿರ್ಭರ ಭಾರತ ಅಭಿಯಾನವನ್ನು ಘೋಷಣೆ ಮಾಡಿದ್ದಾರೆ. 

ಭಾರತ ಕೊರೊನಾ ಸಂಕಷ್ಟ ಕಾಲದಲ್ಲಿ ಸ್ವಾವಲಂಬಿಯಾಗಿ ಬೆಳೆಯಬೇಕು ಎನ್ನುವ ಉದ್ದೇಶದಿಂದ ಆತ್ಮ ನಿರ್ಭರ ಭಾರತ ಅಭಿಯಾನ ಎಂಬ ಘೋಷಣೆ ಮಾಡಿ, 20 ಲಕ್ಷ ಕೋಟಿಯ ಪ್ಯಾಕೇಜ್ ನೀಡಿದ್ದಾರೆ. ಇದು ಭಾರತದ ಜಿಡಿಪಿಯ ಸುಮಾರು 10 ಪ್ರತಿಶತ ಎಂದು ಹೇಳಲಾಗಿದೆ.  ಈ ಪ್ಯಾಕೇಜ್ ಮೂಲಕ ಬಡವರು, ಮಧ್ಯಮವರ್ಗದವರು, ಕೃಷಿಕರು, ಶ್ರಮಿಕರು, ಉಧ್ಯಮ ಕ್ಷೇತ್ರ ಹೀಗೆ ಎಲ್ಲರಿಗೂ ಈ ಸಂಕಷ್ಟದಿಂದ ಹೊರಬರಲು ಸಹಾಯ ಮಾಡಲಾಗುತ್ತದೆ ಎಂದು ಹೇಳಿದರು.  

ಕೊರೊನಾ ಸಂಕಷ್ಟ ಪ್ರಾರಂಭವಾದಾಗ ಹಲವಾರು ವೈದ್ಯಕೀಯ ಅಗತ್ಯ ವಸ್ತುಗಳ ಕೊರತೆಯನ್ನು ಅನಿಭವಿಸಿದ ನಾವು ಇಂದು ಅವುಗಳ ಉತ್ಪಾದನೆಯಲ್ಲಿ  ಸಾಧನೆಯನ್ನು ಮಾಡಿದ್ದೇವೆ. ಇಂದು ಒಂದು ದಿನಕ್ಕೆ ಎರಡು ಲಕ್ಷ ಪಿಪಿಇ ಕಿಟ್ ಮತ್ತು ಎರಡು ಲಕ್ಷ ಏನ್-95 ಮಾಸ್ಕ್ ಗಳನ್ನು ತಯಾರಿಸಲು ಶಕ್ತವಾಗಿದ್ದೇವೆ. ಭಾರತ ಈ ಬಿಕ್ಕಟ್ಟಿನ ಸಮಯವನ್ನು ತನ್ನ ಅವಕಾಶವನ್ನಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದೆ. ಕೊರೊನಾ ಹೋರಾಟದಲ್ಲಿ ಭಾರತದ ಪ್ರಯತ್ನಗಳು ಇಡಿ ಜಗತ್ತಿಗೆ ಆದರ್ಶವಾಗಲಿ ಎಂದು ಆಶಿಸಿದರು. 

 ಆತ್ಮ ನಿರ್ಭರ ಭಾರತ ಅಭಿಯಾನ ಪ್ಯಾಕೇಜ್ ನಿಂದಾಗಿ ಪ್ರತಿಯೊಬ್ಬರಿಗೂ ಆರ್ಥಿಕ ನೆರವು ಉಂಟಾಗಲಿದೆ. ಸರ್ಕಾರ ನೀಡುವ ಪ್ರತಿ ಪೈಸೆಯೂ ಬಡವರ ಕೈಗೆ ದೊರೆಯಲಿದೆ. ಅಲ್ಲದೇ ಈ ಕುರಿತಾದ ಹೆಚ್ಚಿನ ಮಾಹಿತಿಗಳನ್ನು ನಾಳೆ ಹಣಕಾಸು ಸಚಿವರು ವಿವರವಾಗಿ ನೀಡಲಿದ್ದಾರೆ ಎಂದು ಮೋದಿಯವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here