PM Modi Speech In Man Ki Baat

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಾಸಿಕ 66 ನೇಯ “ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ರವಿವಾರ ಬೆಳಗ್ಗೆ 11 ಗಂಟೆಗೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಅವರು ಈ ಸಮಯದಲ್ಲಿ ನಾವು ಎದುರಿಸುತ್ತಿರುವ ಸವಾಲುಗಳಿಗೆ ಹೆದರಬಾರದು, ಸವಾಲುಗಳನ್ನು ಮೆಟ್ಟಿ ಮುನ್ನಡೆಯಬೇಕು ಎಂಬ ಸಂದೇಶವನ್ನು ನೀಡಿದ್ದಾರೆ.

ಈ ಸಮಯದಲ್ಲಿ ಮಾತನಾಡಿದ ನರೇಂದ್ರ ಮೋದಿಯವರು, ಕೊರೊನಾ ಮಹಾಮಾರಿಯಿಂದ ಮಾನವ ಕುಲಕ್ಕೆ ಸಂಕಷ್ಟ ಎದುರಾಗಿದೆ. 2020 ನೇ ವರ್ಷ ಮುಗಿಯುತ್ತಿಲ್ಲ ಎನಿಸುತ್ತಿದೆ. 2020 ನೇ ವರ್ಷ  ಕೆಲವರಿಗೆ ಇಷ್ಟವಾಗುತ್ತಿಲ್ಲ. ಮತ್ತೆ ಕೆಲವರಿಗೆ ಇಷ್ಟವಾಗಿದೆ. ಕಷ್ಟಗಳು ಸದಾ ಬರುತ್ತಲೇ ಇರುತ್ತವೆ. ಕಷ್ಟ ಬಂದ ಕೂಡಲೇ ಈ ವರ್ಷ ಕೆಟ್ಟ ವರ್ಷ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದರು.

ಲಡಾಖ್ ನಲ್ಲಿ ನಮಗೆ ಸವಾಲು ಎಸೆದವರಿಗೆ ಸರಿಯಾದ ತಿರುಗೇಟು ನೀಡಿದ್ದೇವೆ. ನಮ್ಮ ಸೈನಿಕರು ಧೈರ್ಯಶಾಲಿಗಳು ಮತ್ತು ಸರ್ವಸ್ವವನ್ನು ದೇಶಕ್ಕಾಗಿ ತ್ಯಾಗಮಾಡಲು ಸಿದ್ದರಿರುವ ಅವರು ಎದುರಾಳಿಗಳು ಮೇಲುಗೈ ಸಾಧಿಸಲು ಬಿಡಲಿಲ್ಲ. ಅವರ ನೋವನ್ನು ನಾವು ಅನುಭವಿಸುತ್ತೇವೆ. ಅವರ ಶೌರ್ಯವೇ ಭಾರತದ ಶಕ್ತಿ ಎಂದು ಹೇಳಿದರು.

ಇದೆ ಸಮಯದಲ್ಲಿ ಮಂಡ್ಯದ ಮಳವಳ್ಳಿ ತಾಲೂಕಿನ ದಾಸನದೊದ್ದಿಯ ಕಾಮೇಗೌಡ ಅವರ ಪರಿಸರ ಪ್ರೇಮದ ಕುರಿತು ಮಾತನಾಡಿದರು. ಸಣ್ಣ ರೈತರಾಗಿರುವ ಇವರು ತಮ್ಮ ಸ್ವಂತ ಹಣದಲ್ಲಿ 16 ಕೆರೆಗಳನ್ನು ನಿರ್ಮಿಸಿ ನೀರಿನ ಸಮಸ್ಯೆಯನ್ನು ನೀಗಿಸಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದ ಪರಿಸರ ಸೇವೆಯನ್ನು ಪ್ರಧಾನಿಗಳು ಶ್ಲಾಗಿಸಿದ್ದಾರೆ.

ಲಾಕ್ ಡೌನ್ ಸಡಿಲಿಕೆಯ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ 6 ಅಡಿಗಳ ಸಾಮಾಜಿಕ ಅಂತರವನ್ನು ಕಾಪಾಡಿ, ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಬೇಕು. ನಾವೆಲ್ಲರೂ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಂಡು ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಡೋಣ. ಈ ಸಮಯದಲ್ಲಿ ಖಿನ್ನತೆಗೆ ಒಳಗಾಗದೆ ಖುಷಿ ಖುಷಿಯಾಗಿ ಬಾಲ್ಯದ ಆಟಗಳನ್ನು ಆಡುತ್ತ ಹೋರಾಡೋಣ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here