ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಪಂಚಭೂತಗಳಲ್ಲಿ ಲೀನ

pm-modi-performs-last-rites-of-mother-heeraben

ಅಹಮದಾಬಾದ್: ಯು ಎಸ್ ಮೆಹ್ತಾ ಆಸ್ಪತ್ರೆಯಲ್ಲಿ ಇಂದು ಅನಾರೋಗ್ಯದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರು ತಾಯಿ ಹೀರಾಬೆನ್ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ಗಾಂಧಿನಗರದ ಸೆಕ್ಟರ್ 30 ರ ರುದ್ರಭೂಮಿಯಲ್ಲಿ ನೆರವೇರಿಸಲಾಗಿದೆ.

ಪ್ರಧಾನಿ ಮೋದಿಯವರು ತಾಯಿಯ ಪಾರ್ಥೀವ ಶರೀರದ ಚಿತೆಗೆ ಅಗ್ನಿಸ್ಪರ್ಷ ಮಾಡಿದರು. ಈ ಮೂಲಕ ಮೋದಿಯವರ ತಾಯಿ ಹೀರಾ ಬೆನ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

ಇದನ್ನೂ ಓದಿರಿ: ದೇಶಕ್ಕೆ ಹೆಮ್ಮೆ ತಂದ ಪುತ್ರನಿಗೆ ಜನ್ಮ ನೀಡಿದ ಮಹಾತಾಯಿಗೆ ಸದ್ಗತಿ ಕೋರುತ್ತೇನೆ-ಬೊಮ್ಮಾಯಿ

ಹೀರಾಬೆನ್ ಮೋದಿಯವರ ಪಾರ್ಥೀವ ಶರೀರವನ್ನು ಅಹಮದಾಬಾದ್ ಆಸ್ಪತ್ರಯಿಂದ ಪ್ರಹ್ಲಾದ್ ಮೋದಿ ಅವರ ಮನೆಗೆ ಕೊಂಡೊಯ್ಯಲಾಯಿತು. ಹತ್ತಿರದ ಕೆಲವೇ ಕೆಲವು ಕುಟುಂಬಸ್ಥರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಅಂತಿಮ ದರ್ಶನದ ಬಳಿಕ ಪ್ರಹ್ಲಾದ್ ಮೋದಿ ಅವರ ಮನೆಯಿಂದ ಅಂತಿಮ ಯಾತ್ರೆ ಸಾಗಿತು. ಈ ವೇಳೆ ಪ್ರಧಾನಿ ಮೋದಿಯವರು ತಾಯಿಯ ಪಾರ್ಥೀವ ಶರೀರಕ್ಕೆ ಹೆಗಲುಕೊಟ್ಟು ನಡೆದರು. ಗಾಂಧಿನಗರದ ಸೆಕ್ಟರ್ 30 ರಲ್ಲಿ ಇರುವ  ರುದ್ರಭೂಮಿಗೆ ಕರೆತರಲಾಯಿತು. ಅಂತಿಮ ವಿಧಿ ವಿಧಾನವನ್ನು ಹೀರಾಬೆನ್ ಪುತ್ರರಾಗಿರುವಂತ ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸಿದರು. ಆನಂತರ ನರೇಂದ್ರ ಮೋದಿಯವರು ಚಿತೆಗೆ ಅಗ್ನಿ ಸ್ಪರ್ಷ ಮಾಡಿದರು.

ಕಳೆದ ಎರಡು ದಿನಗಳ ಹಿಂದೆ ಆರೋಗ್ಯದಲ್ಲಿ ಬದಲಾವಣೆ ಕಂಡುಬಂದಿತ್ತು. ಕೂಡಲೇ ಚಿಕಿತ್ಸೆಗಾಗಿ ಯು ಎಸ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಮಯದಲ್ಲಿ ಹೀರಾಬೆನ್ ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ ಎಂದು ಹೇಳಲಾಗಿತ್ತು. ಅವರನ್ನು ಮೋದಿ ಭೇಟಿಯಾಗಿಯೂ ಆರೋಗ್ಯ ವಿಚಾರಿಸಿದ್ದರು. ಇಂದು ಅವರನ್ನು ಡಿಸ್ಚಾರ್ಜ್ ಕೂಡ ಮಾಡಲಾಗುತ್ತದೆ ಎನ್ನಲಾಗಿತ್ತು. ಆದರೆ ದಿಡೀರ್ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ 3.39 ರ ಸುಮಾರಿಗೆ ಕೊನೆಯುಸಿರೆಳೆದಿದ್ದರು.

LEAVE A REPLY

Please enter your comment!
Please enter your name here