pm-modi-pays-tribute-to-rajiv-gandhi-on-his-death-anniversary

ನವದೆಹಲಿ: ಇಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯ ತಿಥಿ. ಈ ನಿಮಿತ್ತ ಪ್ರಧಾನಿ ನರೇಂದ್ರ ಮೋದಿಯವರು ರಾಜೀವ್ ಗಾಂಧಿ ಅವರನ್ನು ನೆನೆದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ” ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯತಿಥಿಯಂದು ಅವರಿಗೆ ನಮನಗಳು ” ಎಂದು ಬರೆದಿದ್ದಾರೆ.

ರಾಜೀವ್ ಗಾಂಧಿಯವರ ಹತ್ಯೆಯಾದ ಈ ದಿನವನ್ನು ಇಡಿ ದೇಶದಲ್ಲಿ ಭಯೋತ್ಪಾದಕ ವಿರೋಧಿ ದಿನವೆಂದು ಆಚರಿಸಲಾಗುತ್ತದೆ. ರಾಜೀವ್ ಗಾಂಧಿ ಅವರ ನೆನಪನ್ನು ಮಾಡಿಕೊಳ್ಳುತ್ತ ಅವರ ಪುತ್ರ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ” ನಿಜವಾದ ದೇಶಭಕ್ತ, ಉದಾರ ಮತ್ತು ಲೋಕೋಪಕಾರಿ ತಂದೆಯ ಮಗನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ ” ಎಂದು ಹೇಳಿದ್ದಾರೆ.

1991 ರ  ಮೇ 21 ರಂದು ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯಲ್ಲಿ ತಡರಾತ್ರಿ ಚುನಾವಣಾ ಪ್ರಚಾರದ ರ್ಯಾಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಆಯ್ಕೆಯಾಗಿ ಪ್ರಧಾನಿಹುದ್ದೆಯನ್ನು ತಮ್ಮ 40 ವರ್ಷದಲ್ಲಿಯೇ ಏರಿದ್ದರು.

LEAVE A REPLY

Please enter your comment!
Please enter your name here