pm-modi-pays-tribute-to-mahatma-gandhi-lal-bahadur-shastri-on-their-birth-anniversary

ನವದೆಹಲಿ: ರಾಷ್ಟ್ರಪಿತ  ಮಹಾತ್ಮಾ ಗಾಂಧಿಜಿ ಹಾಗೂ ಭಾರತ ರತ್ನ ಲಾಲ್ ಬಹಾದ್ದೂರ್ ಶಾಸ್ತ್ರೀಜಿ  ಅವರ ಜನ್ಮದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ನಮನ ಸಲ್ಲಿಸಿದ್ದಾರೆ.

ಮಹಾತ್ಮ ಗಾಂಧೀಜಿಯವರ 151 ನೇ ಜನ್ಮದಿನದ ಅಂಗವಾಗಿ ರಾಜ್ ಘಾಟ್ ಗೆ ತೆರಳಿ ನಮನ ಸಲ್ಲಿಸಿದರು. ಅಂತೆಯೇ ಲಾಲ್ ಬಹಾದ್ದೂರ್ ಶಾಸ್ತ್ರೀಜಿ 116 ನೇ ಜನ್ಮದಿನದ  ನಿಮಿತ್ತ ವಿಜಯ್ ಘಾಟ್ ಗೆ ಸಹ ತೆರಳಿ ನಮನವನ್ನು ಸಲ್ಲಿಸಿದ್ದಾರೆ.

ಮಹಾತ್ಮಾ ಗಾಂಧೀಜಿ ಜನ್ಮದಿನದ ಶುಭಾಶಯ  ಕೋರಿ, ಗಾಂಧಿ ಜಯಂತಿಯಂದು ಪ್ರೀತಿಯ ಬಾಪುವಿಗೆ ನಮಸ್ಕರಿಸುತ್ತೇನೆ. ಅವರ ಜೀವನ ಮತ್ತು ಉದಾತ್ತ ಆಲೋಚನೆಗಳಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ ಸಮೃದ್ಧ ಭಾರತ ನಿರ್ಮಾಣದಲ್ಲಿ ಅವರ ಆದರ್ಶಗಳು ನಮಗೆ ಮಾರ್ಗದರ್ಶಕವಾಗಲಿ ಎಂದು ಹೇಳಿದ್ದಾರೆ.

ಇದನ್ನು ಓದಿರಿ: ವಿಶ್ವದ ಅತಿ ಉದ್ದದ ಅಟಲ್ ಸುರಂಗವನ್ನು ಅ.3ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ !

pm-modi-pays-tribute-to-mahatma-gandhi-lal-bahadur-shastri-on-their-birth-anniversary-01

ಲಾಲ್ ಬಹದ್ದೂರ್  ಶಾಸ್ತ್ರೀಜಿ ಜನ್ಮದಿನದ ಶುಭಾಷಯ ತಿಳಿಸಿದ ಅವರು, ಶಾಸ್ತ್ರೀಜಿ ದೃಢ ಮತ್ತು ಸರಳ ವ್ಯಕ್ತಿತ್ವದ ವ್ಯಕ್ತಿಯಾಗಿದ್ದರು. ಭಾರತದ ಕಲ್ಯಾಣಕ್ಕಾಗಿಯೇ ಬದುಕಿದ್ದವರು ಅವರಿಗೆ ಈ ಸಮಯದಲ್ಲಿ ನಮನವನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here