ನವದೆಹಲಿ: 2019 ರಲ್ಲಿ ಮೊದಲಬಾರಿಗೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಸಿದ್ದಗಂಗಾ ಶ್ರೀಗಳ ಅಗಲಿಕೆಯಿಂದ ಉಂಟಾದ ಬೇಸರವನ್ನು ಹೊರಹಾಕಿದ್ದಾರೆ.

ಬಸವಣ್ಣನವರ ಕಾಯಕವೇ ಕೈಲಾಸ ಎಂಬ ನಾಣ್ಣುಡಿಯಂತೆ ಜೀವನ ನಡೆಸಿದ ಸಿದ್ದಗಂಗಾ ಶ್ರೀಗಳು ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಪ್ರಸಿದ್ದರಾಗಿದ್ದರು. ಸಮಾಜಕ್ಕೆ ಅಪಾರವಾದ ಸೇವೆಯನ್ನು ಸಲ್ಲಿಸಿದ,  ಸಾವಿರಾರು ಜನರಿಗೆ ಊಟ, ವಸತಿ ಮತ್ತು ಶಿಕ್ಷಣವನ್ನು ನೀಡಿ ಪೋಷಿಸಿದ ಮಹಾನ್ ಚೇತನವನ್ನು ಕಳೆದುಕೊಂಡು ಅಪಾರವಾದ ನೋವುಂಟಾಗಿದೆ ಎಂದು ಹೇಳಿದರು.

ಬಸವಣ್ಣನವರ ತತ್ವ “ಕಾಯಕವೇ ಕೈಲಾಸ” ಎಂಬಂತೆ ತಮ್ಮ 111 ವರ್ಷಗಳ ಕಾಲ ಬದುಕಿ ತೋರಿದಂತ ಸ್ವಾಮೀಜಿಯನ್ನು ಬೇಟಿಯಾಗುವ ಅವಕಾಶಗಳು ನನಗೆ ಒದಗಿ ಬಂದದ್ದು ನನ್ನ ಸೌಭಾಗ್ಯ ಎಂದು ಸ್ಮರಿಸಿಕೊಂಡರು.

ಇದನ್ನೂ ಓದಿರಿ: ಕೊತ್ತಂಬರಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಏನೇಲ್ಲಾ ಪ್ರಯೋಜನಗಳಿವೆ ಗೊತ್ತೇ..?

Image Copyright : google.com

LEAVE A REPLY

Please enter your comment!
Please enter your name here