ಅಡಕೆ ಹಾಳೆಯ ಉತ್ಪನ್ನಗಳನ್ನು ರಫ್ತು ಮಾಡುವ ದಂಪತಿ ಬಗ್ಗೆ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

pm-modi-mentions-karnataka-palm-leather-startup-in-mannki-baa

ಶಿವಮೊಗ್ಗ: ಅಡಿಕೆ ಹಾಳೆಗಳಿಂದ ವಿವಿಧ ಅಲಂಕಾರಿಕ ವಸ್ತುಗಳು ಮತ್ತು ಬ್ಯಾಗುಗಳನ್ನು ತಯಾರಿಸಿ ವಿದೇಶಕ್ಕೆ ರಫ್ತು ಮಾಡುವ ಮಲೆನಾಡಿನ ಶಿವಮೊಗ್ಗದ ದಂಪತಿಗಳಾದ ಸುರೇಶ್‌ ಹಾಗೂ ಮೈಥಿಲಿ ಬಗ್ಗೆ ಮನ್ ಕಿ ಬಾತ್ ನಲ್ಲಿ ಪ್ರಧಾನಮಂಮತ್ರಿ ನರೇಂದ್ರ ಮೋದಿಯವರು ಭಾನುವಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಅಡಕೆ ಹಾಳೆಯಿಂದ ತಟ್ಟೆ, ಟ್ರೇ, ಬ್ಯಾಗುಗಳು, ಚಪ್ಪಲಿಯಂತ ಆಕರ್ಷಕ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಈ ವಸ್ತುಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಇದನ್ನೂ ಓದಿರಿ: BIGG BOSS ಮನೆಯಿಂದ ಹೊರ ಬಂದ ಅರುಣ್ ಸಾಗರ್: ಟ್ರೋಫಿ ಗೆಲ್ಲುವ ಕನಸು ಭಗ್ನ

ಸುರೇಶ್ ಮತ್ತು ಮೈಥಿಲಿ, ತಮ್ಮ ಸ್ಟಾರ್ಟಪ್ ಭೂಮಿ ಅಗ್ರಿ ವೆಂಚರ್ಸ್ ಮೂಲಕ ಅಡಿಕೆ ಹಾಳೆಗಳಿಂದ ಉತ್ಪನ್ನಗಳನ್ನು ತಯಾರಿಸಿ ರಫ್ತು ಮಾಡುತ್ತಿದ್ದಾರೆ. ಪ್ರಾಣಿಗಳ ಚರ್ಮ, ಪ್ಲಾಸ್ಟಿಕ್ ಮತ್ತು ರಬ್ಬರ್‌ಗಳಿಗೆ ಬದಲಾಗಿ ಪಾಮ್ ಲೆದರ್ ಯೋಜನೆಯನ್ನು ಪ್ರಾರಂಭಿಸಿದ್ದಾರೆ.

ಮನ್ ಕಿ ಬಾತ್ ನಲ್ಲಿ ಈ ದಂಪತಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಮೋದಿಯವರು, ದೇಶವಾಸಿಗಳು ಇಂತಹ ಸ್ವದೇಶಿ ಉತ್ಪನ್ನಗಳನ್ನು ಬಳಸಬೇಕು ಮತ್ತು ಇತರರಿಗೂ ಉಡುಗೊರೆಯಾಗಿ ನೀಡಬೇಕು ಎಂದು ಹೇಳಿದರು.

ಇದನ್ನೂ ಓದಿರಿ: ಭೂಮಿ ದುರ್ಬಳಕೆ ಆರೋಪ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪುತ್ರನ ವಿರುದ್ಧ ದೂರು ದಾಖಲು

LEAVE A REPLY

Please enter your comment!
Please enter your name here