ಗೋರಖ್ ಪುರ (ದಿ.24): ಇಂದು ನರೇಂದ್ರ ಮೋದಿಯವರು ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಕೃಷಿ ಸಮ್ಮಾನ್ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಉದ್ದಾರಕ್ಕಾಗಿ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿಯಲ್ಲಿ ಪ್ರತಿವರ್ಷ 6000 ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗಳಿಗೆ ನೀಡಲಾಗುತ್ತದೆ. ಈ ಹಿಂದಿನ ಸರಕಾರಗಳು ರೈತರ ಉದ್ದಾರದ ಮಾತುಗಳನ್ನಾಡಿದ್ದವೆ ಹೊರತು ಯಾವುದೇ ಯೋಜನೆಗಳನ್ನು ಜಾರಿಗೊಲಿಸಿರಲಿಲ್ಲ. ಆದರೆ ನಮ್ಮ ಸರಕಾರ ಈ ಯೋಜನೆಯನ್ನು ಜಾರಿಗೊಳಿಸಿದ್ದಲ್ಲದೆ ಮೊದಲ ಕಂತಿನ ಹಣವಾಗಿ 2000 ವನ್ನು ಈಗಲೇ ಪಾವತಿಸಲಿದೆ ಎಂದು ಹೇಳಿದರು.
ನಮ್ಮ ಸರಕಾರ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯನ್ನು ಘೋಷಿಸಿದ ತಕ್ಷಣ ವಿರೋಧ ಪಕ್ಷಗಳಿಗೆ ಆತಂಕ ಉಂಟಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸಿದವು. ಈ ಯೋಜನೆಯಿಂದಾಗಿ ರೈತರು ಮೋದಿಯ ಪರವಾಗಲಿದ್ದಾರೆ ಎಂಬುದು ಅವರ ಆತಂಕವಾಗಿತ್ತು. ಇದಕ್ಕಾಗಿ ಈಗ ಹಣ ನೀಡಿ ಮತ್ತೆ ಹಣವನ್ನು ಕಸಿದುಕೊಳ್ಳಲಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಆದರೆ ಈ ಯೋಜನೆ ರೈತರ ಹಕ್ಕು, ಇದನ್ನು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಸ್ವತಃ ಮೋದಿಯೂ ಕಸಿದುಕೊಳ್ಳಲಾಗದು ಎಂದು ಹೇಳಿದರು.
ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಗೆ ನೀಡಲಾಗುವ ಪ್ರತಿ ಪೈಸೆಯೂ ಮೋದಿ ಸರಕಾರದಿಂದ ನೀಡಲಾಗುತ್ತದೆ. ರಾಜ್ಯಸರಕಾರಗಳ ಕೆಲಸ ಕೇವಲ ಫಲಾನುಭವಿಗಳನ್ನು ಗುರುತಿಸುವುದು ಮಾತ್ರ ಆಗಿದೆ ಎಂದರು. ಇನ್ನೂ ಕೆಲವು ರಾಜ್ಯ ಸರಕಾರಗಳು ನಿದ್ದೆಯಿಂದ ಎದ್ದಿಲ್ಲ, ಈ ಯೋಜನೆಯ ಸರಿಯಾದ ಫಲಾನುಭವಿಗಳಿಗೆ ಹಣ ತಲುಪಿಸದೆ ಇದ್ದಲ್ಲಿ ಮತ್ತು ಅಪಪ್ರಚಾರ ಮಾಡುವವರಿಗೆ ಸರಿಯಾದ ಬುದ್ಧಿಕಲಿಸಿ ಎಂದು ನರೇಂದ್ರ ಮೋದಿಯವರು ಹೇಳಿದರು.
ಇದನ್ನೂ ಓದಿರಿ :ಟೊಮೇಟೊಗಾಗಿ ಪಾಕಿಸ್ತಾನಿ ನ್ಯೂಸ್ ರಿಪೋರ್ಟರ್ ನಿಂದ ಬಾಂಬ್ ಬೆದರಿಕೆ…!
Image Copyright : google.com