ಟ್ರೆಂಡ್ ಆಯಿತು ಮೋದಿ ಟ್ವೀಟ್ ಮಾಡಿದ “ಮೇ ಭೀ ಚೌಕಿದಾರ್” ವಿಡಿಯೋ…!

     ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕುರಿತಾಗಿ ಹಗುರವಾಗಿ ಮಾತನಾಡುತ್ತ ಮೋದಿಯವರು ಕೇವಲ ಸೇವಕ ಎಂದು ಟೀಕಿಸುತ್ತಿತ್ತು. ಅಲ್ಲದೇ ರಾಹುಲ್ ಗಾಂಧಿಯವರು ತಮ್ಮ ಭಾಷಣಗಳಲ್ಲಿ ಚೌಕಿದಾರ್ ಚೋರ್ ಎಂದು ಹೀಯಾಳಿಸುತ್ತಿತ್ತು. ಇದನ್ನೇ ಉಪಯೋಗಿಸಿಕೊಂಡ ಮೋದಿಯವರು ಹೌದು ನಾನೋಬ್ಬ ಸೇವಕ..! ನಾನು ಈ ದೇಶದ ಜನರ ಸೇವೆ ಮಾಡಲು ನೇಮಕಗೊಂಡಿರುವ ಪ್ರಧಾನ ಸೇವಕ ಎಂದು ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೇ ತಾನು ಹೇಗೆ ಜನಸಾಮಾನ್ಯರ ಸೇವಕನೋ ಹಾಗೆಯೇ ಜನರ ಕಷ್ಟ ಸುಖಗಳಲ್ಲಿ ಭಾಗಿದಾರನೂ ಹೌದು ಎಂದಿದ್ದರು.
     ಮೊದಲಿನಿಂದಲೂ ನರೇಂದ್ರ ಮೋದಿಯವರು ತನ್ನ ಮೇಲಾಗುವ ಅವಮಾನಗಳಿಗೆ ಕುಗ್ಗದೇ ಅದನ್ನೇ ತನ್ನ ಅಸ್ತ್ರವಾಗಿಸಿಕೊಳ್ಳಬಲ್ಲ ಚತುರ. 2014 ರ ಚುನಾವಣೆಯ ಸಂದರ್ಭದಲ್ಲಿ ಅವರ ಮೇಲೆ ಮಾಡಲಾದ “ಚಾಯವಾಲ” ಎಂಬ ಅವಮಾನವನ್ನೇ ಬಳಸಿಕೊಂಡವರು ಅವರು. ಇನ್ನು “ಚೌಕಿದಾರ್” ಎಂದು ಕರೆಯುವ ಈ ಮಾತನ್ನು ಸುಲಭವಾಗಿ ಬಿಡುವರೇ..? ಅವರು ಟ್ವಿಟ್ಟರ್ ನಲ್ಲಿ “ನಾನು ಕೂಡ ಚೌಕಿದಾರನೆ” ಎನ್ನುವ ವಿಡಿಯೋ ವೊಂದನ್ನು ಬಿಟ್ಟು, ಎಂಬ ಹ್ಯಾಶ್ ಟ್ಯಾಗ್ ಅಭಿಯಾನ ಆರಂಭಿಸಿದ್ದಾರೆ. ಅವರ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಟ್ರೆಂಡ್ ಸೆಟ್ ಮಾಡಿದ್ದು, ಎಲ್ಲೆಡೆಯೂ #MainBhiChowkidar ಹ್ಯಾಶ್ ಟ್ಯಾಗ್ ರಾರಾಜಿಸುತ್ತಿದೆ.

     ಈ ದೇಶದ ಚೌಕಿದಾರ್ ದೃಡವಾಗಿ ನಿಂತು ನಿಮ್ಮ ಸೇವೆಯನ್ನು ಮಾಡುತ್ತಿದ್ದಾನೆ. ನಾನು ಒಬ್ಬಂಟಿಯಲ್ಲ, ಬ್ರಷ್ಟಾಚಾರ, ಸಮಾಜದಲ್ಲಿನ ಕೆಟ್ಟ ಮತ್ತು ಕುತಂತ್ರಗಳನ್ನು ತಡೆಯುವ ಪ್ರತಿಯೊಬ್ಬರೂ ಚೌಕಿದಾರರೆ. ದೇಶದ ಪ್ರಗತಿಗಾಗಿ ಕೈಜೋಡಿಸಿ ಸಹಕರಿಸುವ ಪ್ರತಿಯೊಬ್ಬರೂ ನಾನು ಕೂಡ ಚೌಕಿದಾರ ಎಂದು ಹೇಳಿಕೊಳ್ಳಬೇಕು ಎಂದಿದ್ದಾರೆ.
     ಅತೀ ಹೆಚ್ಚು ಸಮಯ ದೇಶವನ್ನಾಳಿದ ಪಕ್ಷದಿಂದ ಸಾಧ್ಯವಾಗದ ಕೆಲಸಗಳನ್ನು ಕೇವಲ ಐದು ವರ್ಷಗಳಲ್ಲಿ ಪೂರೈಸುವ ಪ್ರಯತ್ನಮಾಡಿದ್ದೇನೆ. ಇನ್ನೂ ಅನೇಕ ಕಾರ್ಯಗಳು ಆಗಬೇಕಿದೆ. ಹಾಗಾಗಿ ಮತ್ತೊಮ್ಮೆ ಅವಕಾಶವನ್ನು ನೀಡಬೇಕು ಎಂದು ಸಾಗುತ್ತಿರುವ ಈ ಸಂಧರ್ಭದಲ್ಲಿ ಈ ವಿಡಿಯೋ ಟ್ರೆಂಡ್ ಆಗಿದ್ದು, ಇದು ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿರಿ : ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಂಡ ಕಾಂಗ್ರೆಸ್ ಸೋಶಿಯಲ್ ಮೀಡಿಯಾ : ನೆಟ್ಟಿಗರಿಂದ ಪಂಚ..!
SPONSORED CONTENT

 

LEAVE A REPLY

Please enter your comment!
Please enter your name here