pm-modi-inaugurates-kashi-vishwanath-corridor

ವಾರಾಣಸಿ: ದೇಶದ ಪುಣ್ಯ ಕ್ಷೇತ್ರ ಕಾಶಿ ವಿಶ್ವನಾಥ ದೇವಾಲಯಕ್ಕೆ ಕಾಯಕಲ್ಪ ನೀಡಬೇಕೆಂಬ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ಇಂದು ಪೂರ್ಣಗೊಂಡಿದೆ. ಇಂದು (ಡಿ.13) ಮೋದಿಯವರು ಗಂಗೆಯಲ್ಲಿ ಮಿಂದೆದ್ದು ‘ಕಾಶಿ ವಿಶ್ವನಾಥ ಕಾರಿಡಾರ್’ ಉದ್ಘಾಟನೆ ಮಾಡಿದರು.

ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಿ, ವೈಭವೋಪೇತ ಕಾರಿಡಾರ್ ನ್ನು ನಿರ್ಮಿಸಿರುವ ಎಲ್ಲಾ ಕಾರ್ಮಿಕರಿಗೂ ಧನ್ಯವಾದ ತಿಳಿಸಿದರು. ತಾವು ಏಳು ವರ್ಷಗಳ ಹಿಂದೆ ಕಾರಿಡಾರ್ ನಿರ್ಮಿಸುವ ಮಾತು ನೀಡಿದ್ದನ್ನು ಇಂದು ಮೋದಿಯವರು ಕಾರ್ಯರೂಪಕ್ಕೆ ತಂದಿದ್ದಾರೆ.

ಈ ಹಿಂದೆ ದೇವಾಲಯದ ಪ್ರಾಂಗಣ ಕೇವಲ 3,000 ಚದರ ಅಡಿಯಷ್ಟಿದ್ದು, ಈಗ 5 ಲಕ್ಷ ಚದರ ಅಡಿಯಷ್ಟಾಗಿದೆ. ಇದೀಗ 50,000 ದಿಂದ 75,000 ಮಂದಿ ಭಕ್ತಾದಿಗಳು ದೇವಾಲಯ ಹಾಗೂ ದೇವಾಲಯದ ಪ್ರಾಂಗಣಕ್ಕೆ ಏಕಕಾಲದಲ್ಲಿ ಬರುವಂತೆ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿರಿ: Miss Universe – 2021: 21 ವರ್ಷಗಳ ನಂತರ ಭಾರತಕ್ಕೆ ಭುವನ ಸುಂದರಿ ಪಟ್ಟ; ಕಿರೀಟ ತೊಟ್ಟ ಹರ್ನಾಜ್ ಸಂಧು

ಇಂದು ಬೆಳಿಗ್ಗೆ 12 ಗಂಟೆ ವೇಳೆಗೆ ವಾರಣಾಸಿಗೆ ಬಂದಿಳಿದ ಮೋದಿಯವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ವಾಗತಿಸಿದರು. ಅಲ್ಲಿಂದ ಪ್ರಧಾನಿಗಳು ನೇರವಾಗಿ ಕಾಲ ಭೈರವ ದೇವಾಲಯಕ್ಕೆ ತೆರಳಿದ ಪೂಜೆ ಸಲ್ಲಿಸಿದರು. ನಂತರ ಲಲಿತಾ ಘಾಟ್, ಖಿರ್ಕಿಯಾ ಘಾಟ್ ಮೂಲಕ ಬೋಟ್​​​ನಲ್ಲಿ ಪ್ರಯಾಣ ಬೆಳೆಸಿ, ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಆಗಮಿಸಿದರು.

LEAVE A REPLY

Please enter your comment!
Please enter your name here