ದಕ್ಷಿಣ ಭಾರತದ ಮೊದಲ ‘ಒಂದೇ ಭರತ್’ ಎಕ್ಸ್ ಪ್ರೆಸ್’ ರೈಲಿಗೆ ಮೋದಿ ಚಾಲನೆ !

ಒಂದೇ ಭರತ್' ಎಕ್ಸ್ ಪ್ರೆಸ್ | pm-modi-gave-green-signal-to-vande-bharat-express

ಬೆಂಗಳೂರು (ನ.11) : ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಂಗಳೂರು-ಮೈಸೂರು-ಚೆನ್ನೈ ನಡುವೆ ಸಂಚರಿಸಲಿರುವ ‘ಒಂದೇ ಭರತ್’ ಎಕ್ಸ್ ಪ್ರೆಸ್‘ ರೈಲಿಗೆ ಚಾಲನೆ ನೀಡಿದ್ದಾರೆ.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಮಾರು 10.25 ರ ಸುಮಾರಿಗೆ ಒಂದೇ ಭರತ್’ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ. ಈ ಸಮಯದಲ್ಲಿ ರಾಜ್ಯಪಾಲರಾದ ತಾವರ್ ಚಂದ್ ಗೆಹಲೋಟ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಪ್ರಹಲ್ಲಾದ್ ಜೋಶಿ ಸೇರಿದಂತೆ ರಾಜ್ಯ ಪ್ರಮುಖ ನಾಯಕರು ಹಾಜರಿದ್ದರು.

ವಂದೇ ಭರತ್ ರೈಲಿನ ವಿಶೇಷತೆ ಏನು ?

ದೇಶೀಯವಾಗಿ ನಿರ್ಮಾಣಗೊಂಡಿರುವ, ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಸುಸಜ್ಜಿತ ರೈಲು ಇದಾಗಿದೆ. ಈ ರೈಲು ಐಷಾರಾಮಿ ಸೌಲಭ್ಯಗಳನ್ನು ಹೊಂದಿದ್ದು, ಪ್ರಯಾಣಿಕರು ತಮ್ಮ ಸಿಟುಗಳನ್ನು ವಿಮಾನದಂತೆ 180 ಡಿಗ್ರಿ ತಿರುಗಿಸಬಹುದಾಗಿದೆ. ಈ ರೈಲು ಹವಾನಿಯಂತ್ರಿತ, ಎಕಾನಮಿ ಮತ್ತು ಎಕ್ಸಿಕ್ಯೂಟಿವ್ ದರ್ಜೆಯ ಪ್ರಯಾಣಿಕರ್ ಕೋಚ್ ಗಳನ್ನು ಹೊಂದಿದೆ. ವೀಶೇಷವಾಗಿ ಈ ರೈಲಿನಲ್ಲಿ ಸ್ವಯಂ ಚಾಲಿತ ಬಾಗಿಲು, ವೈ ಪೈ ಸೌಲಭ್ಯ, ಚಾರ್ಜಿಂಗ್ ಪಾಯಿಂಟ್, ರೈಡಿಂಗ್ ಲೈಟ್, ಸಿಸಿಟಿವಿ, ಬಯೋ ಶೌಚಾಲಯ ವ್ಯವಸ್ಥೆಗಳನ್ನು ಹೊಂದಿದೆ.

ಒಂದೇ ಭರತ್ ಎಕ್ಸ್ ಪ್ರೆಸ್ ರೈಲು 16 ಬೋಗಿಗಳನ್ನು ಹೊಂದಿದ್ದು, 384 ಮೀ. ಉದ್ದವನ್ನು ಹೊಂದಿದೆ. ಇದರಲ್ಲಿ 1,128 ಪ್ರಯಾಣಿಕರ ಸೀಟ್ ಲಭ್ಯವಿದೆ ಎಂದು ಹೇಳಲಾಗಿದೆ. ಈ ರೈಲು ಮೈಸೂರು-ಚೆನ್ನೈ ನಡುವಿನ 504 ಕಿ.ಮೀ. ದೂರವನ್ನು ಕೇವಲ 7 ತಾಸುಗಳಲ್ಲಿ ಕ್ರಮಿಸಲಿದೆ. ಅಲ್ಲದೇ ದಕ್ಷಿಣ ಭಾರತದಲ್ಲಿ ಆರಂಭವಾದ ಮೊದಲ ‘ಒಂದೇ ಭರತ್’ ಎಕ್ಸ್ ಪ್ರೆಸ್’ ರೈಲು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ವೈರಲ್ ಸುದ್ದಿಗಳು 

LEAVE A REPLY

Please enter your comment!
Please enter your name here