ಮಾತ್ರ ವಿಯೋಗದ ದುಃಖದ ನಡುವೆಯೂ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ತಾನೊಬ್ಬ ದೇಶ ಸೇವಕ, ತನಗೆ ವಹಿಸಿದ ಕಾರ್ಯದಲ್ಲಿ ತಾನೆಷ್ಟು ಬದ್ಧನಾಗಿದ್ದೇನೆ ಎಂದು ತೋರಿಸಿಕೊಟ್ಟಿದ್ದಾರೆ.
ನರೇಂದ್ರ ಮೋದಿಯವರು ಇಂದು ಬೆಳಗ್ಗೆ ಜನ್ಮ ನೀಡಿದ ಅಮ್ಮ ಹೀರಾಬೆನ್ ರನ್ನು ಕಳೆದುಕೊಂಡರು. ಕೂಡಲೇ ಗುಜರಾತಿಗೆ ತೆರಳಿ ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾದರು. ದೇಶದ ಪ್ರಧಾನಿಯೊಬ್ಬರ ತಾಯಿಯವರ ಅಂತ್ಯಕ್ರಿಯೆ ಯಾವುದೇ ಪ್ರಚಾರ, ಆಡಂಬರಗಳಿಲ್ಲದೇ ನಡೆದೇ ಹೋಯಿತು.
ನಿಗದಿಯಂತೆ ಇಂದು ಪ್ರಧಾನಿಗಳು ಪಶ್ಚಿಮ ಬಂಗಾಳದ ಹೌರಾದಲ್ಲಿ “ಒಂದೇ ಭರತ್ ಎಕ್ಸ್ ಪ್ರೆಸ್” ಯೋಜನೆಗೆ ಹಸಿರು ನಿಶಾನೆ ತೋರಿಸಬೇಕಿತ್ತು. ಆದರೆ ಮಾತ್ರವಿಯೋಗದ ಹಿನ್ನೆಲೆಯಲ್ಲಿ ಗುಜರಾತಿಗೆ ಹೋಗಬೇಕಾಯಿತು. ತಾಯಿಯ ಅಂತ್ಯಕ್ರಿಯೆ ನೆರವೇರಿಸಿ, ಅಲ್ಲಿಂದ ಹೋರಾಟ ಮೋದಿಯವರು ಕೋಲ್ಕತ್ತಾದಲ್ಲಿ ನಡೆಯುತ್ತಿದ್ದ ಒಂದೇ ಭರತ್ ಎಕ್ಸ್ ಪ್ರೆಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾದರು.
ಇದನ್ನೂ ಓದಿರಿ: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಪಂಚಭೂತಗಳಲ್ಲಿ ಲೀನ