ಸನ್ಮಾನ್ಯ ನರೇಂದ್ರ ಮೋದಿಯವರು ಇಂದು ಇಂಡಿಯಾ ಗೇಟ್ ಹತ್ತಿರದಲ್ಲಿ ನಿರ್ಮಿಸಲಾಗಿರುವ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಲೋಕಾರ್ಪಣೆ ಮಾಡಿದರು.ದೇಶಕಾಗಿ ಪ್ರಾಣತ್ಯಾಗಮಾಡಿದ ಕೆಚ್ಚೆದೆಯ ಸೈನಿಕರ ನೆನಪಿಗಾಗಿ ಈ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ.ಈ ಮೂಲಕ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿದೆ.ಹಲವು ದಶಕಗಳಿಂದ ಸಾಧ್ಯವಾಗದ ಕಾರ್ಯವನ್ನು ಮೋದಿ ನೇತ್ರತ್ವದ ಕೇಂದ್ರ ಸರಕಾರ ಕೇವಲ ಐದು ವರ್ಷಗಳಲ್ಲಿ ಮಾಡಿ ತೋರಿಸಿದೆ.
ಬಹು ಬೇಡಿಕೆಯ ರಾಷ್ಟ್ರೀಯ ಸ್ಮಾರಕವನ್ನು ಸುಮಾರು 40 ಎಕರೆ ವಿಸ್ತೀರ್ಣದಲ್ಲಿ 200 ಕೋಟಿಗಳ ವೆಚ್ಚವನ್ನು ಮಾಡಿ ನಿರ್ಮಿಸಲಾಗಿದ್ದು, ವಿಶ್ವ ಧರ್ಜೆಯಲ್ಲಿ ಈ ಸ್ಮಾರಕ ಕಂಗೊಳಿಸುತ್ತಿದೆ. ಇದನ್ನು ಚಕ್ರವ್ಯೂಹದ ರೀತಿಯಲ್ಲಿ ನಿರ್ಮಿಸಲಾಗಿದ್ದು, ಇಲ್ಲಿಯವರೆಗೆ ದೇಶಕ್ಕಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟ 25,942 ಯೋಧರ ಹೆಸರುಗಳನ್ನುಇಲ್ಲಿ ಕೆತ್ತಲಾಗಿದೆ.ಇಲ್ಲಿ ನಾಲ್ಕು ಚಕ್ರಾಕಾರದ ನಿರ್ಮಾಣವನ್ನು ಮಾಡಲಾಗಿದ್ದು, ಮೊದಲನೆಯ ಚಕ್ರವನ್ನು ಅಮರ ಚಕ್ರ, ಎರಡನೆಯದನ್ನು ವೀರತಾ ಚಕ್ರ, ಮೂರನೆಯದನ್ನು ತ್ಯಾಗ ಚಕ್ರ ಮತ್ತು ನಾಲ್ಕನೆಯ ಚಕ್ರವನ್ನು ರಕ್ಷಕ ಚಕ್ರ ಎಂದು ಹೆಸರಿಸಲಾಗಿದೆ.ಈ ಸ್ಮಾರಕದ ಮಧ್ಯ ಭಾಗದಲ್ಲಿ ಸುಮಾರು 15 ಅಡಿಗಳಷ್ಟು ಎತ್ತರವಿರುವ ಸ್ಥಂಭವನ್ನು ನಿರ್ಮಿಸಿ ಅದರಲ್ಲಿ ಸದಾ ಪ್ರಜ್ವಲಿಸುವ ಅಮರ ಜ್ಯೋತಿಯನ್ನು ಇಡಲಾಗಿದೆ.ಈ ಸ್ಥಂಭದ ಬುಡದಲ್ಲಿ ಖ್ಯಾತ ಲೇಕಖ ಶ್ರೀ ಜಗದಂಬಾ ಮಿಶ್ರಾರವರ ” ಶಹೀದ್ ಕಿ ಮಂಜ್ರೋಪರ್” ಎಂಬ ಸಾಲುಗಳನ್ನು ಕೆತ್ತಲಾಗಿದೆ.ಇನ್ನು ಈ ಸ್ಥಳದಲ್ಲಿ ಯುದ್ಧದ ಸಮಯದಲ್ಲಿ ಧೈರ್ಯ ಸಾಹಸ ತೋರಿದ ಸೈನಿಕರ 6 ಪುತ್ತಳಿಗಳನ್ನು ಸ್ಥಾಪಿಸಲಾಗಿದೆ.
ಇನ್ನು ಸ್ಮಾರಕವನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತ ಪುಲ್ವಾಮಾ ದಾಳಿಯಲ್ಲಿ ಬಲಿಯಾದ ಸೈನಿಕರನ್ನು ನೆನೆದರು.ಇಷ್ಟು ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಕೇವಲ ತನ್ನ ಪರಿವಾರವನ್ನು ಉದ್ಧಾರ ಮಾಡಿಕೊಂಡಿದೆ.ಸೈನಿಕರ ಬಹುದಿನಗಳ ಬೇಡಿಕೆಯಾಗಿದ್ದ ಬುಲೆಟ್ ಪ್ರೂಪ್ ಜಾಕೆಟ್ ಸೇರಿದಂತೆ ಅತ್ಯಾಧುನಿಕ ಯುದ್ಧ ಸಾಮಗ್ರಿಗಳ ಕರೀದಿಯಲ್ಲಿಯೂ ದೇಶಕ್ಕೆ ಮೋಸ ಮಾಡಲಾಗಿದೆ.ಆದರೆ ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಸೈನ್ಯಕ್ಕೆ ಅತ್ಯಾಧುನಿಕ ಯುದ್ಧ ಸಾಮಗ್ರಿಗಳನ್ನು ಒದಗಿಸಲಾಗಿದೆ.ಅಲ್ಲದೇ ಯುದ್ಧ ವಿಮಾನಗಳನ್ನು ನೀಡಲಾಗಿದೆ ಎಂದು ಹೇಳಿದರು.ಈಗ ಅತ್ಯಾಧುನಿಕ ರಾಫೆಲ್ ಯುದ್ಧ ವಿಮಾನ ಕರೀದಿಗೂ ತೊಡಕಾಗಿ ದೇಶಕ್ಕೆ ಮೋಸಮಾಡಲು ಹೊರಟಿದೆ ಎಂದು ಕಟುವಾಗಿ ಟೀಕಿಸಿದರು.
ಇದನ್ನೂ ಓದಿರಿ :ಟೊಮೇಟೊಗಾಗಿ ಪಾಕಿಸ್ತಾನಿ ನ್ಯೂಸ್ ರಿಪೋರ್ಟರ್ ನಿಂದ ಬಾಂಬ್ ಬೆದರಿಕೆ…!

 

Image Copyright : google.com

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here