ಬೆಂಗಳೂರು: ಪ್ರಪಂಚವೇ ಭಾರತದ ಸಾಹಸವನ್ನು ಬೆರಗಾಗಿ ನೋಡುತ್ತಿದ್ದ ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್, ಅರ್ಬಿಟೋರ್ ನಿಂದ ತನ್ನ ಸಂಪರ್ಕವನ್ನು ಕಳೆದುಕೊಂಡಿದೆ. ಈ ಸಾಧನೆಯನ್ನು ಹತ್ತಿರದಿಂದ ನೋಡಲು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೋ ಕೇಂದ್ರ ಕಚೇರಿ ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಈ ಯೋಜನೆಯು ಸಂಪೂರ್ಣ ಯಶಸ್ವಿಯಾಗದ ಹಿನ್ನೆಲೆಯಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಧೈರ್ಯ ತುಂಬುವ ಕೆಲಸ ಮಾಡಿದ್ದರೆ.
ಚಂದ್ರಯಾನ್ -2ರ ಲ್ಯಾಂಡರ್ ‘ವಿಕ್ರಮ್’ ಚಂದ್ರನ ಮೇಲ್ಮೈಯನ್ನು ಮುಟ್ಟುವ ಕೆಲವೇ ನಿಮಿಷಗಳ ಮೊದಲು ಇಸ್ರೋದಿಂದ ಸಂಪರ್ಕವನ್ನು ಕಳೆದುಕೊಂಡಿತು, ನಂತರ ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿಜ್ಞಾನಿಗಳನ್ನು ಪ್ರೋತ್ಸಾಹಿಸುವ ಮಾತುಗಳನ್ನಾಡಿದರು. “ಈ ಮಿಶನ್ ನಿಂದ ಸಂಪೂರ್ಣ ಯಶಸ್ಸು ಸಿಗದಿರಬಹುದು ಆದರೆ ನೀವು ಈ ಮೂಲಕ ದೇಶವೇ ತಲೆಎತ್ತಿ ನಡೆಯುವಂತಹ ಕೆಲಸವನ್ನು ಮಾಡಿದ್ದೀರಿ. ಸಾಹಿತಿಗಳ ಕಲ್ಪನೆಯನ್ನು ಸಾಕಾರಮಾಡಲು ಪ್ರಯತ್ನ ಪಟ್ಟಿದ್ದೀರಿ. ವಿಜ್ಞಾನವು ಎಂದೂ ವಿಫಲವಾಗುವುದಿಲ್ಲ, ಪ್ರಯೋಗಗಳು ಮತ್ತು ಪ್ರಯತ್ನಗಳು ಮಾತ್ರ ನಡೆಯುತ್ತಿರುತ್ತವೆ. ನಾವು ಮಾಡಿದ ತಪ್ಪುಗಳಿಂದ ಪಾಠವನ್ನು ಕಲಿಯಬೇಕು. ಖಂಡಿತವಾಗಿಯೂ ಯಶಸ್ಸು ನಮ್ಮೊಂದಿಗೆ ಇದ್ದೆ ಇದೆ” ಎಂದು ಹೇಳಿದರು.
ಇದನ್ನೂ ಓದಿರಿ :ಪ್ರಧಾನಿ ಮೋದಿಯವರಿಗೆ ಸಿಕ್ಕ ಗಿಪ್ಟ್ ಗಳನ್ನು ನೀವು ಪಡೆದುಕೊಳ್ಳಬಹುದು..!
ಇದನ್ನೂ ಓದಿರಿ: ಚಂದ್ರಯಾನ-2 : ವಿಕ್ರಮ್ ರೋವರ್ ಲ್ಯಾಂಡಿಂಗ್ ನ ಸವಾಲುಗಳು
ಇಸ್ರೋನ ಮಿಷನ್ ಕಂಟ್ರೋಲ್ ಸೆಂಟ್ರಲ್ ನಲ್ಲಿ ಮಾತನಾಡುತ್ತ ಪ್ರಧಾನಿ, ” ನಿಮ್ಮ ಎಲ್ಲ ಪ್ರಯತ್ನಗಳ ಜೊತೆಯಲ್ಲಿ ನಾನು ಇರುತ್ತೇನೆ, ನಿರಂತರ ನಿಮ್ಮ ಪ್ರಯತ್ನವನ್ನು ಮುಂದುವರೆಸಿ ಗೆಲುವು ನಮದಾಗಿಯೇ ಆಗುತ್ತದೆ. ಪ್ರತಿಯೊಂದು ಸೋಲು ನಮಗೆ ಒಂದೊಂದು ಪಾಠವನ್ನು ಕಲಿಸುತ್ತದೆ, ನಮ್ಮನ್ನು ಎತ್ತರಕ್ಕೂ ಕರೆದೊಯ್ಯುತ್ತದೆ. ವಿಜ್ಞಾನಿಗಳೇ ಭಾರತ ಯಾವಾಗಲು ನಿಮ್ಮೊಂದಿಗಿದೆ. ಹೆಮ್ಮೆಯಿಂದ ಇನ್ನಷ್ಟು ಅವಕಾಶಗಳನ್ನು ನೀಡುತ್ತದೆ. ನಮ್ಮದು ಅಮೃತ ಸಂತಾನ ಇದಕ್ಕೆ ಸೋಲು, ನಿರಾಶೆಗಳು ಇಲ್ಲ.ಗುರಿ ತಲುಪುವ ತನಕ ಮುನ್ನಡೆಯೋಣ. ನಮ್ಮ ತಡೆಯಲು ಯಾರಿಂದ ಸಾಧ್ಯ” ಎಂದು ಹೇಳಿದ್ದರೆ.
ಬಿಕ್ಕಿದ ಅಧ್ಯಕ್ಷರನ್ನು ಸಂತೈಸಿದ ಮೋದಿ
ಹಲವು ದಿನಗಳಿಂದ ಹಗಲು ರಾತ್ರಿ ಎನ್ನದೇ ಶ್ರಮವಹಿಸಿದ್ದ ಕಾರ್ಯ ಪೂರ್ಣ ಗೊಳ್ಳದೆ ವಿಜ್ಞಾನಿಗಳು ದುಃಖದಲ್ಲಿದ್ದರು. ಇಸ್ರೋದ ಸಾಧನೆಯನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಮೋದಿಯವರನ್ನು ನೋಡಿದ ಅಧ್ಯಕ್ಷ ಶಿವನ ಒಂದು ಕ್ಷಣ ಭಾವುಕರಾದರು. ಇದನ್ನು ಗಮನಿಸಿದ ಮೋದಿಯವರು ನೀವು ಚಿಂತೆ ಮಾಡಬೇಡಿ ದೇಶವೇ ತಲೆಎತ್ತಿ ನಿಲ್ಲುವಂತಹ ಸಾಧನೆಯನ್ನು ಮಾಡಲು ಹೊರಟಿದ್ದೀರಿ. ಅತೀ ಶಿಗ್ರದಲ್ಲಿಯೇ ಗೆಲುವು ನಮ್ಮದಾಗಲಿದೆ. ದುಃಖಿಸದಿರಿ. ಇಡೀ ದೇಶವೇ ನಿಮ್ಮ ಜೊತೆಗಿದೆ ಎಂದು ಹೇಳಿದರು. ಒಂದು ಕ್ಷಣ ಅಧ್ಯಕ್ಷ ಕೆ. ಶಿವನ್ ಭಾವುಕರಾದಾಗ ಅವರನ್ನು ತಬ್ಬಿ ಸಮಾಧಾನ ಪಡಿಸಿದರು.
#WATCH PM Narendra Modi hugged and consoled ISRO Chief K Sivan after he(Sivan) broke down. #Chandrayaan2 pic.twitter.com/bytNChtqNK
— ANI (@ANI) September 7, 2019
SPONSORED CONTENT
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”2180″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020190903125926″);
document.getElementById(“div_6020190903125926”).appendChild(scpt);